Job Description: * ಹಿಮಾಚಲ ಪ್ರದೇಶದ ಬಿಜೆಪಿ ಸಂಸದರಾಗಿರುವ ರಾಮ್ ಸ್ವರೂಪ್ ಶರ್ಮಾ ಅವರು ಇತ್ತೀಚಿಗೆ ನಿಧನರಾಗಿದ್ದು, ದೆಹಲಿ ಪೊಲೀಸರು ಮಾಹಿತಿಯ ನೀಡಿರುವ ಪ್ರಕಾರ ಶರ್ಮಾ ಅವರು ದೆಹಲಿಯ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಶರ್ಮಾ ರವರ ಸಾವಿಗೆ ಕಾರಣ ತಿಳಿದು ಬಂದಿಲ್ಲ. * 1958ರಲ್ಲಿ ರಾಮ್ ಸ್ವರೂಪ್ ಶರ್ಮಾ'ರವರು ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಜನಿಸಿದ್ದರು. * ಮೊದಲ ಬಾರಿ 2014ರಲ್ಲಿ ಸಂಸತ್ಗೆ ಆಯ್ಕೆಯಾಗಿದ್ದರು, ಮತ್ತು 2019ರಲ್ಲಿ ಎರಡನೆಯ ಬಾರಿ ಆಯ್ಕೆಯಾಗಿ ವಿದೇಶಾಂಗ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯಲ್ಲಿ ಕಾರ್ಯ ನಿರ್ವಹಿಸಿದ್ದರು. * ಹಿಮಾಚಲ ಪ್ರದೇಶದ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.