Job Description: * ಭಾರತ ದೇಶವು ಬಾಂಗ್ಲಾದೇಶದ ಮೊದಲ ರಾಷ್ಟ್ರಪತಿಯಾಗಿದ್ದ ದಿವಂಗತ ಶೇಖ್ ಮುಜಿಬುರ್ ರಹಮಾನ್ ಅವರ ಜನ್ಮ ಶತಮಾನೋತ್ಸವದ ನೆನೆಪಿಗಾಗಿ ಒಟ್ಟು 109 ಆಂಬುಲೆನ್ಸ್ಗಳನ್ನು ಬಾಂಗ್ಲಾದೇಶಕ್ಕೆ ಕೊಡುಗೆಯಾಗಿ ನೀಡಲಿದೆ ಎಂದು ತಿಳಿದು ಬಂದಿದೆ. * ವಿದೇಶಾಂಗ ಸಚಿವ ಅಕ್ ಅಬ್ದುಲ್ ಮೊಮೆನ್ ಅವರಿಗೆ, ಭಾರತೀಯ ಹೈಕಮಿಷನರ್ ಆಗಿರುವ ವಿಕ್ರಮ್ ದೋರೈಸ್ವಾಮಿ ಯವರು ಸಭೆಯಲ್ಲಿ ವಿಷಯ ತಿಳಿಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಪ್ರಕಟಣೆಯಲ್ಲಿ ನೀಡಿರುವ ಮಾಹಿತಿಯಿಂದ ತಿಳಿದುಬಂದಿದೆ. * ಒಟ್ಟು 109 ಆಂಬುಲೆನ್ಸ್ಗಳನ್ನು ಪ್ರಧಾನಿ ನರೇಂದ್ರ ಮೋದಿ ಯವರು ರಹಮಾನ್ ಅವರ ಜನ್ಮ ಶತಮಾನೋತ್ಸವ ಮತ್ತು ಬಾಂಗ್ಲಾದೇಶದ ಸ್ವಾತಂತ್ರ್ಯದ ಸುವರ್ಣ ಮಹೋತ್ಸವದ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ಪ್ರವಾಸ ಕೈಗೊಂಡಾಗ ಈ ಆಂಬುಲೆನ್ಸ್ಗಳನ್ನು ವಿತರಿಸಲಾಗುವದು ಎಂದು ಸಚಿವಾಲಯ ಮಾಹಿತಿಯನ್ನು ನೀಡಿದೆ. * ಬಾಂಗ್ಲಾ ದೇಶ ಪ್ರಧಾನಿ ಶೇಖ್ ಹಸೀನಾ ಅವರ ಸ್ವಾಗತದ ಮೇರೆಗೆ ಪ್ರಧಾನಿ ಮೋದಿ ಅವರು ಮಾರ್ಚ್ 26 ಮತ್ತು 27 ರಂದು ಬಾಂಗ್ಲಾದೇಶಕ್ಕೆ ಭೇಟಿ ನೀಡಲಿದ್ದಾರೆ. * ಪ್ರಧಾನಿ ಮೋದಿ ಈ ಬಾಂಗ್ಲಾ ಭೇಟಿಯುನ್ನು ಮುಜಿಬ್ ಬೊರ್ಶೋ ಎಂಬ ಹೆಸರಿನಲ್ಲಿ ಆಚರಿಸಲಾಗುವದು ಎಂದು ತಿಳಿಸಲಾಗಿದೆ.