Job Description: * ಐಪಿಎಸ್ ಅಧಿಕಾರಿ ಕೊಡಗಿನ ಅಯ್ಯಪ್ಪ ಗಣಪತಿ ಅವರನ್ನು ರಾಷ್ಟ್ರೀಯ ಭದ್ರತಾ ದಳದ (NSG) ಮಹಾ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ. * ಈ ಮೊದಲು ಎಂ.ಎ. ಗಣಪತಿ ಅವರು ನಾಗರಿಕ ವಿಮಾನಯಾನದ ಭದ್ರತಾ ವಿಭಾಗ ಮಹಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. * ಎಂ.ಎ. ಗಣಪತಿ ಅವರು 1986ನೇ ಸಾಲಿನ ಹಿರಿಯ ಐಪಿಎಸ್ ಅಧಿಕಾರಿಯಾಗಿದ್ದಾರೆ, ಇವರು 29 ಫೆಬ್ರವರಿ 2024ರಂದು ಸೇವೆಯಿಂದ ನಿವೃತ್ತಿಯಾಗಲಿದ್ದಾರೆ, ಹಾಗೂ ಇವರು 2024ರ ವರೆಗೆ NSGಯ ಮಹಾ ನಿರ್ದೇಶಕರಾಗಿ ಸೇವೆಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. * ಎಂ.ಎ.ಗಣಪತಿ ಅವರು 1999ರಲ್ಲಿ ಕೇಂದ್ರಿಯ ತನಿಖಾ ಸಂಸ್ಥೆ (CBI)ನಲ್ಲೂ ಸೇವೆ ಸಲ್ಲಿಸಿದ್ದಾರೆ, ಹಾಗೂ ಇವರ ಅತ್ಯುನ್ನತ ಸೇವೆ ಸಲ್ಲಿಸಿದಕ್ಕಾಗಿ ರಾಷ್ಟ್ರಪತಿಗಳ ವಿಶೇಷ ಸೇವಾ ಪದಕವನ್ನು ಪಡೆದು ಕೊಂಡಿದ್ದಾರೆ.