Job Description: * ಭಾರತೀಯ ರೈಲ್ವೆ ಇಲಾಖೆಯು ಪ್ರಯಾಣಿಕರ ಅನುಕೂಲಕ್ಕಾಗಿ ಸಹಾಯವಾಣಿಯೊಂದನ್ನ ಸಿದ್ಧಪಡಿಸಿದೆ, ಈ ಸಹಾಯವಾಣಿ ಸಂಖ್ಯೆಯಿಂದ ರೈಲ್ವೆ ಸೇವೆ ಸಂಬಂಧಿ ಎಲ್ಲಾ ವಿಷಯ ಮತ್ತು ಗೊಂದಲಗಳನ್ನು ಪರಿಹಾರಮಾಡಿಕೊಳ್ಳಬಹುದಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. * ರೈಲ್ವೆ ಇಲಾಖೆ ಈ ಹಿಂದೆ ಎರಡು ಸಹಾಯವಾಣಿ ಸಂಖ್ಯೆಗಳನ್ನೂ 182 ಹಾಗೂ 138ಯನ್ನ ಹೊಂದಿತ್ತು ಇದೀಗ ಈ ಎರಡು ಸಂಖ್ಯೆಗಳನ್ನೂ ಮರ್ಜ್ ಮಾಡಿ ಹೊಸ ಸಹಾಯವಾಣಿ 139 ಸಂಖ್ಯೆಯನ್ನು ಜಾರಿಗೆ ತಂದಿದೆ. * ಪ್ರಸ್ತುತ ರೈಲ್ವೆ ಇಲಾಖೆಯ ಹೊಸ ಸಹಾಯವಾಣಿ ಸಂಖ್ಯೆಯಾಗಿರುವ 139ನಲ್ಲಿ ಒಟ್ಟು 12 ಭಾಷೆಗಳು ಲಭ್ಯವಿದೆ. ರೈಲ್ವೆ 139 ಸಹಾಯವಾಣಿಯಿಂದ ಪಡೆಯಬಹುದಾದ ಮಾಹಿತಿ: * ರೈಲ್ವೆ ಸೇವೆ ಸಂಬಂಧಿ ದೂರು, ಪಾರ್ಸಲ್ ವಿಚಾರಣೆ, ಅಪಘಾತ ವಿಚಾರಣೆ, ಮೆಡಿಕಲ್ ಅಸಿಸ್ಟಂಟ್ ಸ್ಟೇಷನ್ ಕಂಪ್ಲೇಂಟ್, ಈ ಎಲ್ಲ ಮಾಹಿತಿಗಳನ್ನು ರೈಲ್ವೆ ಇಲಾಖೆಯ ಹೊಸ ಸಹಾಯವಾಣಿಯಿಂದ ಪಡೆಯಬಹುದಾಗಿದೆ ಎಂದು ರೈಲ್ವೆ ಇಲಾಖೆ ಮಾಹಿತಿಯನ್ನು ನೀಡಿದೆ. ಭಾರತೀಯ ರೈಲ್ವೆ ಇಲಾಖೆಯ ಕುರಿತು : * ಕೇಂದ್ರ ಸರ್ಕಾರದ ರೈಲ್ವೆ ಸಚಿವಾಲಯದ ಅಡಿಯಲ್ಲಿ ಭಾರತದ ರಾಷ್ಟ್ರೀಯ ರೈಲ್ವೆ ವ್ಯವಸ್ಥೆ ಕಾರ್ಯ ನಿರ್ವಹಿಸುತ್ತದೆ. * ವಿಶ್ವದ ಅತಿದೊಡ್ಡ ಜಾಲತಾಣಗಳಲ್ಲಿ ಭಾರತೀಯ ರೈಲ್ವೆ ಜಾಲತಾಣವು ನಾಲ್ಕನೇ ಕ್ರಮಾಂಕದಲ್ಲಿದೆ. * ಭಾರತದ ರಾಷ್ಟ್ರೀಯ ರೈಲ್ವೆ ವ್ಯವಸ್ಥೆಯನ್ನು 16 ಏಪ್ರಿಲ್ 1853 ರಂದು ಸ್ಥಾಪನೆಯಾಗಿದೆ. * ಪ್ರಧಾನ ಕಚೇರಿ : ನವದೆಹಲಿ * 2016-2017 ರ ಮಾಹಿತಿ ಅನ್ವಯ ರೈಲ್ವೆ ಇಲಾಖೆಯಲ್ಲಿ ನೌಕರರು : 13,08,000 * ರೈಲ್ವೆ ಇಲಾಖೆಯ ಪ್ರತಿ ವರ್ಷ ಅಂದಾಜು ಆದಾಯ : 1.97 ಲಕ್ಷ ಕೋಟಿ ರೂ.