Job Description: * ರಾಜಸ್ಥಾನದ ಮತ್ತು ಗುಜರಾತಿನ ಮಾಜಿ ರಾಜ್ಯಪಾಲ ಹಾಗೂ ಪ್ರಸ್ತುತ ಇವರು ರಾಜಸ್ಥಾನ ಹೈಕೋರ್ಟ್ ಮಾಜಿ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿದ್ದ ಅನ್ಶುಮಾನ್ ಸಿಂಗ್ ರವರು ಇತ್ತೀಚಿಗೆ ತಮ್ಮ 85ನೇ ವಯಸ್ಸಿನಲ್ಲಿ ನಿಧನರಾದರು. * 1935 ರಲ್ಲಿ ಅಲಹಾಬಾದ್ನಲ್ಲಿ ಜನಿಸಿದ ಅವರು ಕಲೆ ಮತ್ತು ಕಾನೂನು ಅಧ್ಯಯನ ಮಾಡಿದರು ಮತ್ತು ಮೊದಲು 1957 ರಲ್ಲಿ ಅಲಹಾಬಾದ್ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲರಾಗಿ ಸೇವೆ ಸಲ್ಲಿಸಿದ್ದಾರೆ. * ಜನೇವರಿ 1999 ರಿಂದ ಮೇ 2003 ರವರೆಗೆ ರಾಜಸ್ಥಾನದ ರಾಜ್ಯದ ರಾಜ್ಯಪಾಲರಾಗಿದ್ದರು. * ಈ ಮೊದಲು ಅವರು 1998 ರಲ್ಲಿ ಗುಜರಾತ್ ರಾಜ್ಯದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. * ರಾಜಸ್ಥಾನ ರಾಜ್ಯದ ರಾಜ್ಯಪಾಲರಾಗಿದ್ದ ಸಮಯದಲ್ಲಿ ಮುರಾರಿ ಬಾಪು ಅವರ ಪ್ರವಚನಗಳನ್ನು ಕಾರ್ಯಕ್ರಮವನ್ನು ರಾಜಭವನದಲ್ಲಿ ಆಯೋಜಿಸಿ ಈ ಮೂಲಕ ಸಂಗ್ರಹವಾದ ಹಣವನ್ನು ಬರಗಾಲ ಪೀಡಿತ ಜನರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ರಾಜಸ್ಥಾನದ ಬಗ್ಗೆ ಮಾಹಿತಿ : * ರಾಜಸ್ಥಾನವು ಉತ್ತರ ಭಾರತದ ರಾಜ್ಯವಾಗಿದ್ದು, ಒಟ್ಟು ವಿಸ್ತೀರ್ಣ 342,239 ಚದರ ಕಿಲೋಮೀಟರ್ ಮತ್ತು ಭಾರತದ ಒಟ್ಟು ಭೌಗೋಳಿಕ ಪ್ರದೇಶದ ಶೇಕಡಾ 10.4 ರಷ್ಟಿದೆ. * ಭಾರತದ ಅತಿದೊಡ್ಡ ರಾಜ್ಯ ಮತ್ತು ಜನಸಂಖ್ಯೆಯಲ್ಲಿ ಏಳನೇ ದೊಡ್ಡ ರಾಜ್ಯವಾಗಿದೆ. * ರಾಜ್ಯಪಾಲ : ಕಲ್ರಾಜ್ ಮಿಶ್ರಾ ಟ್ರೆಂಡಿಂಗ್ * ರಾಜಧಾನಿ : ಜೈಪುರ * ಮುಖ್ಯಮಂತ್ರಿ : ಅಶೋಕ್ ಗೆಹ್ಲೋಟ್ * 2012 ರ ಜನಗಣತಿ ಪ್ರಕಾರ ಜನಸಂಖ್ಯೆ 6.89 ಕೋಟಿ ಗುಜರಾತಿನ ಬಗ್ಗೆ ಮಾಹಿತಿ : * ಗುಜರಾತ್ ರಾಜ್ಯವು ಭಾರತದ ಪಶ್ಚಿಮ ಕರಾವಳಿಯಲ್ಲಿ 1,600 ಕಿ.ಮೀ ಒಟ್ಟು ವಿಸ್ತೀರ್ಣ ಹೊಂದಿರುವ ರಾಜ್ಯವಾಗಿದೆ. ಈ ರಾಜ್ಯವು ಒಟ್ಟು 60.4 ಮಿಲಿಯನ್ ಜನಸಂಖ್ಯೆ ಹೊಂದಿದೆ. * ಇದು ಭಾರತದ ಪ್ರಕಾರ ಐದನೇ ಅತಿದೊಡ್ಡ ಭಾರತೀಯ ರಾಜ್ಯ ಮತ್ತು ಜನಸಂಖ್ಯೆಯಲ್ಲಿ ಒಂಬತ್ತನೇ ಅತಿದೊಡ್ಡ ರಾಜ್ಯವಾಗಿದೆ. * ಗುಜರಾತ್ ರಾಜಧಾನಿ: ಗಾಂಧಿನಗರ * ಗುಜರಾತ್ ರಾಜ್ಯಪಾಲರು: ಆಚಾರ್ಯ ದೇವವ್ರತ್ * ಗುಜರಾತ್ ಮುಖ್ಯಮಂತ್ರಿ: ವಿಜಯ್ ರೂಪಾನಿ