Job Description: * ವಿಶ್ವ ಮಹಿಳಾ ದಿನಾಚರಣೆಯ ಹಿನ್ನಲೆಯಿಂದಾಗಿ 23 ವರ್ಷಗಳ ಬಳಿಕ ಭಾರತೀಯ ಯುದ್ಧ ನೌಕೆಗೆ 4ಮಹಿಳೆಯರನ್ನು ನೇಮಕ ಮಾಡಿಕೊಳ್ಳಲಾಗಿದೆ. * INS ವಿಕ್ರಮಾದಿತ್ಯ ವಿಮಾನ ವಾಹಕ ನೌಕೆಗೆ ಇಬ್ಬರು ಮಹಿಳೆಯರು ಮತ್ತು INS ಶಕ್ತಿ ಟ್ಯಾಂಕರ್ಗೆ ಇಬ್ಬರು ಮಹಿಳೆಯರು, ಒಟ್ಟಾರೆ 4 ಮಹಿಳೆಯರನ್ನು ಯುದ್ಧ ನೌಕಾಪಡೆಗೆ ನೇಮಕ ಮಾಡಲಾಗಿದೆ. * ಈ ಹಿಂದೆ 1998ರಲ್ಲಿ ಪ್ರಥಮ ಬಾರಿಗೆ ಯುದ್ಧನೌಕೆಗೆ ಮಹಿಳೆಯರನ್ನು ನೇಮಕ ಮಾಡಲಾಗಿತ್ತು, ಹಲವು ಕಾರಣಗಳಿಂದ ಅನುಷ್ಠಾನ ಸಾಧ್ಯವಾಗಿರಲಿಲ್ಲ, ಪ್ರಸ್ತುತ ಇದೀಗ ಮಾರ್ಚ್ 8ರ ವಿಶ್ವ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ 4 ಮಹಿಳೆಯರನ್ನು ಯುದ್ಧನೌಕೆಗೆ ನೇಮಕ ಮಾಡುವ ಮೂಲಕ ಮಹಿಳೆಯರಿಗೆ ಅವಕಾಶ ನೀಡಲಾಗಿದೆ. INS ವಿಕ್ರಮಾದಿತ್ಯ ಬಗ್ಗೆ ಮಾಹಿತಿ : * ಪ್ರಥಮವಾಗಿ ಐಎನ್ಎಸ್ ವಿಕ್ರಮಾದಿತ್ಯ 1987 ರಲ್ಲಿ ಕಾರ್ಯಾರಂಭ ಪ್ರಾರಂಭಸಿತು. * ಭಾರತವು ಜನವರಿ 20, 2004 ರಂದು INS ವಿಕ್ರಮಾದಿತ್ಯ ಇದನ್ನು 2.35 ಬಿಲಿಯನ್ ಅಂತಿಮ ಬೆಲೆಗೆ ಖರೀದಿಸಿತು. * INS ವಿಕ್ರಮಾದಿತ್ಯ ಹಡಗನ್ನು ಜುಲೈ 2013 ರಲ್ಲಿ ಸಮುದ್ರದಲ್ಲಿ ಪ್ರಯೋಗಿಸಲಾಯಿತು, ಮತ್ತು 2013 ಸೆಪ್ಟೆಂಬರ್ ರಲ್ಲಿ ವಾಯುಯಾನ ಪ್ರಯೋಗಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು. * ಭಾರತೀಯ ನೌಕಾಪಡೆಗೆ 14 ಜೂನ್ 2014 ರಂದು ಐಎನ್ಎಸ್ ವಿಕ್ರಮಾದಿತ್ಯ ಸೆರಿಸಿಕೊಳ್ಳಲಾಗಿದೆ.