Job Description: * 2021ರ ಗಣರಾಜ್ಯೋತ್ಸವ ದಿನಾಚರಣೆಯ ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ಈ ಬಾರಿ ಕರ್ನಾಟಕದ ಹೊಸ ಜಿಲ್ಲೆಯಾದ ವಿಜಯನಗರ ಸಾಮ್ರಾಜ್ಯ ಮತ್ತು ವೈಭವದ ಮಾಹಿತಿಯನ್ನು ತಿಳಿಸುವ ಸ್ತಬ್ಧಚಿತ್ರ ಆಯ್ಕೆಯಾಗಿದೆ. * ವಿಜಯನಗರ ಸಾಮ್ರಾಜ್ಯವನ್ನು ಸಂಗಮ ರಾಜವಂಶದ ಹರಿಹರ-1 ಮತ್ತು ಬುಕ್ಕರಾಯ-1 ಈ ಸೋದರರು ಸ್ಥಾಪಿಸಿದರು. * ಹಂಪಿ-ವಿಜಯನಗರವು, 1500ನೇ ಇಸವಿಯಲ್ಲಿ ಬೀಜಿಂಗ್ನ ನಂತರ, ವಿಶ್ವದ ಅತೀ ದೊಡ್ಡ ಹಾಗೂ ಭಾರತದ ಅತ್ಯಂತ ಸಿರಿವಂತ ನಗರವಾಗಿತ್ತು. * ಕರ್ನಾಟಕದ ಈ ಹಂಪಿ-ವಿಜಯನಗರಸಾಮ್ರಾಜ್ಯವು, ಯುನೆಸ್ಕೋ ವತಿಯಿಂದ ವಿಶ್ವ ಪರಂಪರೆಯ ಸ್ಥಳ ಎಂದು ಹೆಸರುವಾಸಿಯಾಗಿದೆ.