Job Description: * ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯದ ಹಳ್ಳಿ ಮತ್ತು ಪಟ್ಟಣ ಜನತೆಗೆ ಅನುಕೂಲವಾಗಲೆಂದು, ಜನಸೇವಕ ಹಾಗೂ ಗ್ರಾಮ ಒನ್ ಸೇವೆಯ ಯೋಜನೆಯನ್ನು ಬೆಂಗಳೂರಿನಲ್ಲಿ ಜಾರಿಗೆಗೊಳಿಸಿದೆ, ಮತ್ತು ಇದನ್ನು ಶೀಘ್ರದಲ್ಲಿ ರಾಜ್ಯದ ಗ್ರಾಮಗಳಿಗೂ ವಿಸ್ತರಣೆಮಾಡಲಾಗುವದು ಎಂದು ಸರ್ಕಾರ ತಿಳಿಸಿದೆ. * ಈ ಯೋಜನೆ ಮೂಲಕ ಜನರು ತಮ್ಮ ತಮ್ಮ ಗ್ರಾಮಗಳಲ್ಲಿ ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಪಿಂಚಣಿ, ವೃದ್ಧಾಪ್ಯ ವೇತನ, ವಿಧವಾ ವೇತನ, ಆರೋಗ್ಯ ಕಾರ್ಡ್, ಹಿರಿಯ ನಾಗರಿಕ ಗುರುತಿನ ಚೀಟಿ ಸೇವೆಗಳ ಜೊತೆಗೆ ಮೈಕ್ರೋ ಬ್ಯಾಂಕಿಂಗ್ ಸೇವೆ ಪ್ರಾರಂಭವಾಗಲಿದೆ ಎಂದು ರಾಜ್ಯ ಸರ್ಕಾರ ಮಾಹಿತಿಯನ್ನು ನೀಡಿದೆ. * ಪ್ರಸ್ತುತ ಈ ಜನಸೇವಕ ಯೋಜನೆಯು ಬೆಂಗಳೂರಿನ ರಾಜಾಜಿನಗರ, ದಾಸರಹಳ್ಳಿ, ಬೊಮ್ಮನಹಳ್ಳಿ, ಮಹದೇವಪುರ, ಎಂಬ ಪ್ರದೇಶಗಳಲ್ಲಿ ಜಾರಿಯಾಗಿದ್ದು, ಶೀಘ್ರದಲ್ಲೇ ರಾಜ್ಯದ ಎಲ್ಲಕಡೆಗೂ ಈ ಯೋಜನೆ ಜಾರಿಯಾಗಲಿದೆ ಎಂದು ಸರ್ಕಾರ ತಿಳಿಸಿದೆ.