Job Description: ➤ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಆಡಳಿತ ಮಂಡಳಿಯು ಜೂನ್ 29, 2026 ರಂದು ನಡೆದ ಸಭೆಯಲ್ಲಿ ರಾಜೀವ್ ಕುಮಾರ್ ಅವರನ್ನು ಬ್ಯಾಂಕಿನ ಹೆಚ್ಚುವರಿ ನಿರ್ದೇಶಕರನ್ನಾಗಿ (ಸ್ವತಂತ್ರ ನಿರ್ದೇಶಕ) 4 ವರ್ಷಗಳ ಅವಧಿಗೆ (ಜೂನ್ 30, 2026 ರಿಂದ ಜಾರಿಗೆ ಬರುವಂತೆ) ನೇಮಕ ಮಾಡಿದೆ.ಇದರೊಂದಿಗೆ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಅನುಮೋದನೆಗೆ ಒಳಪಟ್ಟು, ಅವರನ್ನು 3 ವರ್ಷಗಳ ಅವಧಿಗೆ ಬ್ಯಾಂಕಿನ ಪಾರ್ಟ್-ಟೈಮ್ ಅಧ್ಯಕ್ಷರನ್ನಾಗಿ (Part-time Chairman) ನೇಮಿಸಲು ಒಪ್ಪಿಗೆ ನೀಡಲಾಗಿದೆ. ಇವರು ಈ ಹಿಂದೆ ನೈತಿಕ ಕಾರಣಗಳನ್ನು ನೀಡಿ ಹಠಾತ್ ರಾಜೀನಾಮೆ ನೀಡಿದ್ದ ಅತನು ಚಕ್ರವರ್ತಿ ಅವರ ಸ್ಥಾನಕ್ಕೆ ಬರಲಿದ್ದಾರೆ (ಮಧ್ಯಂತರ ಅವಧಿಗೆ ಕೇಕಿ ಮಿಸ್ತ್ರಿ ಈ ಜವಾಬ್ದಾರಿ ನಿಭಾಯಿಸಿದ್ದರು).➤ ರಾಜೀವ್ ಕುಮಾರ್: ಐಎಎಸ್ ಅಧಿಕಾರಿ: ರಾಜೀವ್ ಕುಮಾರ್ ಅವರು 1984ರ ಬ್ಯಾಚ್‌ನ ಜಾರ್ಖಂಡ್ ಕೆಡರ್‌ನ ನಿವೃತ್ತ ಐಎಎಸ್ (IAS) ಅಧಿಕಾರಿಯಾಗಿದ್ದಾರೆ. ಕೇಂದ್ರ ಹಣಕಾಸು ಕಾರ್ಯದರ್ಶಿ: ಇವರು ಫೆಬ್ರವರಿ 2020 ರಲ್ಲಿ ಭಾರತ ಸರ್ಕಾರದ ಹಣಕಾಸು ಕಾರ್ಯದರ್ಶಿಯಾಗಿ (Finance Secretary) ನಿವೃತ್ತರಾದರು. ಮುಖ್ಯ ಚುನಾವಣಾ ಆಯುಕ್ತರು (CEC): ಇವರು ಭಾರತದ 25ನೇ ಮುಖ್ಯ ಚುನಾವಣಾ ಆಯುಕ್ತರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ನಾಯಕತ್ವದಲ್ಲೇ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ಚುನಾವಣೆಯಾದ 2024ರ ಲೋಕಸಭಾ ಚುನಾವಣೆ ಯಶಸ್ವಿಯಾಗಿ ನಡೆದಿತ್ತು. ಇತರ ಪ್ರಮುಖ ಹುದ್ದೆಗಳು: ಸಾರ್ವಜನಿಕ ಉದ್ಯಮಗಳ ಆಯ್ಕೆ ಮಂಡಳಿ (PESB) ಅಧ್ಯಕ್ಷರಾಗಿ, ಆರ್‌ಬಿಐ (RBI) ಕೇಂದ್ರೀಯ ಮಂಡಳಿ, ಎಸ್‌ಬಿಐ (SBI) ಮತ್ತು ನಬಾರ್ಡ್ (NABARD) ಮಂಡಳಿಗಳ ಸದಸ್ಯರಾಗಿಯೂ ಇವರು ಕಾರ್ಯನಿರ್ವಹಿಸಿದ್ದಾರೆ. ➤ ಬ್ಯಾಂಕಿಂಗ್ ಸುಧಾರಣೆಯಲ್ಲಿ ಇವರ ಕೊಡುಗೆ: ಬ್ಯಾಂಕುಗಳ ವಿಲೀನ: ದೇಶದ 27 ಸಾರ್ವಜನಿಕ ವಲಯದ ಬ್ಯಾಂಕುಗಳನ್ನು (PSBs) 10 ದೊಡ್ಡ ಬ್ಯಾಂಕುಗಳಾಗಿ ಕ್ರೋಢೀಕರಿಸುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು. 4R ತಂತ್ರ (4R Strategy): ಸಾರ್ವಜನಿಕ ವಲಯದ ಬ್ಯಾಂಕುಗಳ ವರದಿಯಾಗದ ವರಹಾಗದ ಸಾಲಗಳನ್ನು (NPAs) ನಿಯಂತ್ರಿಸಲು Recognition (ಗುರುತಿಸುವಿಕೆ), Resolution (ಪರಿಹಾರ), Recapitalisation (ಮರು ಬಂಡವಾಳೀಕರಣ) ಮತ್ತು Reforms (ಸುಧಾರಣೆಗಳು) ಎಂಬ 4R ತಂತ್ರವನ್ನು ಜಾರಿಗೆ ತಂದಿದ್ದರು. ಕಪ್ಪು ಹಣದ ವಿರುದ್ಧ ಕ್ರಮ: ಇವರು ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಸುಮಾರು 3.38 ಲಕ್ಷ ಶೆಲ್ ಕಂಪನಿಗಳ (Shell Companies) ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಲಾಗಿತ್ತು.