Job Description: * ಇದೀಗ ಭಾರತವು ಸ್ವದೇಶಿ ನಿರ್ಮಿತ 9mm ಮೆಷಿನ್ ಪಿಸ್ತೂಲ್ (ASMI) ಅನ್ನು ಅಭಿವೃದ್ಧಿಪಡಿಸಿದೆ. * ರಕ್ಷಣಾ ವ್ಯವಸ್ಥೆಗೆ ಉತ್ತೇಜನ ನೀಡುವ ಸಲುವಾಗಿ DRDO ಮತ್ತು ಭಾರತೀಯ ಸೇನೆ ಜಂಟಿಯಾಗಿ ಈ ಮಷೀನ್ ಗನ್ ಅನ್ನು ಆತ್ಮ ನಿರ್ಬರ್ ಯೋಜನೆ ಅಡಿಯಲ್ಲಿ ತಯಾರಿಸಲಾಗಿದೆ ಎಂದು ಇನ್ ಫೆಂಟ್ರಿ ಸ್ಕೂಲ್ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಬನ್ಸೋಡ್ʼನ ಯುವ ಅಧಿಕಾರಿಯವರು ತಿಳಿಸಿದ್ದಾರೆ. * ಭಾರತೀಯ ಸೇನೆಯ ಪದಾತಿದಳ ಶಾಲೆ ಮತ್ತು ಪುಣೆಯ DRDOದ ಆರ್ಮಮೆಂಟ್ ರಿಸರ್ಚ್ ಅಂಡ್ ಡೆವಲಪ್ ಮೆಂಟ್ ಎಸ್ಟಾಬ್ಲಿಷ್ ಮೆಂಟ್ (ARDE) ಈ 9mm ಮಷೀನ್ ಗನ್ ಅನ್ನು ತಯಾರಿಸಲಾಗಿದೆ ಎಂದು DRDO ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆಯನ್ನು ನೀಡಿದೆ, ಹಾಗೂ ಈ ಮೆಷಿನ್ ಪಿಸ್ತೂಲ್ ಗೆ "ಅಸ್ಮಿ" ಎಂದು ನಾಮಕರಣ ಮಾಡಲಾಗಿದೆ.