Job Description: * 2011 ರಿಂದ 2020ರ ಅವಧಿಯಲ್ಲಿ ಅತಿ ಹೆಚ್ಚು ತಾಪಮಾನ ದಾಖಲಾದ ವರ್ಷಗಳ ಮಾಹಿತಿಯನ್ನು ವಿಶ್ವ ಹವಾಮಾನ ಸಂಸ್ಥೆಯು ಬಿಡುಗಡೆಗೊಳಿಸಿದೆ. * ಈ ಹಿಂದಿನ ವರ್ಷಗಳಾದ 2015, 2016 ಮತ್ತು 2019, ಈ ಮೂರು ವರ್ಷಗಳಿಗೆ ಹೋಲಿಸಿದಾಗ 2020ನೇ ವರ್ಷ ಅತಿ ಹೆಚ್ಚು ತಾಪಮಾನ ದಾಖಲಾದ ವರ್ಷವಾಗಿದೆ, ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಯಂಟೊನಿಯೊ ಗುಟೆರಸ್ ಮಾಹಿತಿಯನ್ನು ನೀಡಿದ್ದಾರೆ. * ಮುಂದಿನ ಹವಾಮಾನದ ದಿನಗಳಲ್ಲಿ ಇದೆ ತರಹ ತಾಪಮಾನ ಹೆಚ್ಚಾದಲ್ಲಿ ಅದು ಜನರ ಜೀವನದ ಮೇಲೆ ಪರಿಣಾಮ ಬೀಳುವುದು ಸಂಶಯವಿಲ್ಲ ಹಾಗೂ ದುರಂತ ಕೂಡ ಕಾಣಬಹುದು ಎಂದು ವಿಶ್ವ ಹವಾಮಾನ ಸಂಸ್ಥೆಯು ತಿಳಿಸಿದೆ.