Job Description: * ಪ್ರಸ್ತುತ ಭಾರತದಲ್ಲಿ ಏಳು ಸಾವಿರಕ್ಕೂ ಹೆಚ್ಚು ಅಟಲ್ ಟಿಂಕರಿಂಗ್ ಲ್ಯಾಬ್ಗಳಿವೆ, ಅದರಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಇತ್ತೀಚೆಗೆ ದೇಶಾದ್ಯಂತ 100 ಅಟಲ್ ಟಿಂಕರಿಂಗ್ ಲ್ಯಾಬ್ಗಳನ್ನು ಅಳವಡಿಸಿಕೊಳ್ಳಲು ಎಂದು ಘೋಷಿಸಿದೆ. * 100 ಅಟಲ್ ಟಿಂಕರಿಂಗ್ ಲ್ಯಾಬ್ಗಳನ್ನು ಅಳವಡಿಸಿಕೊಳ್ಳುವ ಮೂಲಕ, ವಿದ್ಯಾರ್ಥಿಗಳಿಗೆ ಅತ್ಯಾಧುನಿಕ ತಂತ್ರಜ್ಞಾನಗಳಲ್ಲಿ ತರಬೇತಿ ನೀಡಲು ಇಸ್ರೋ ಸಹಾಯ ಮಾಡುವದರ ಜೊತೆಗೆ ಬಾಹ್ಯಾಕಾಶ ಸಂಬಂಧಿತ ತಂತ್ರಜ್ಞಾನಗಳಿಗೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತದೆ, ಜೊತೆಯಲ್ಲಿ ತಂತ್ರಜ್ಞಾನಗಳ ವಿಷಯಗಳನ್ನು ಹಂಚಿಕೊಳ್ಳಲಿದೆ ಎಂದು ತಿಳಿಸಿದೆ. * ಅಟಲ್ ಟಿಂಕರಿಂಗ್ ಲ್ಯಾಬ್ಗಳನ್ನು ಅಟಲ್ ಇನ್ನೋವೇಶನ್ ಮಿಷನ್ ಕಾರ್ಯಕ್ರಮದಡಿಯಲ್ಲಿ ಎನ್ಐಟಿಐ ಆಯೋಗ್ ಸ್ಥಾಪಿಸುತ್ತದೆ.