Job Description: * ರಾಜ್ಯ ಸರ್ಕಾರವು ಸುವರ್ಣ ಗ್ರಾಮ ಯೋಜನೆಯಡಿಯಲ್ಲಿ ಗ್ರಾ.ಪಂ ಅಭಿವೃದ್ಧಿಗಾಗಿ 1ಕೋಟಿ ರೂ.ಅನುದಾನ ನೀಡಲಾಗುತ್ತದೆ ಎಂದು ರಾಜ್ಯ ಸರ್ಕಾರದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. * ಈ ಹಿಂದೆ ರಾಜ್ಯದಲ್ಲಿ ಸುವರ್ಣ ಗ್ರಾಮ ಯೋಜನೆಯನ್ನು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಜಾರಿಗೆ ತಂದಿದ್ದರು, ಇದಾದ ನಂತರ ಕಾಂಗ್ರೆಸ್ ಸರ್ಕಾರ ಈ ಯೋಜನೆ ರದ್ದುಗೊಳಿಸಿ ಗ್ರಾಮವಿಕಾಸ್ ಎಂಬ ಹೊಸ ಯೋಜನೆಯನ್ನು ಜಾರಿ ಮಾಡಿತ್ತು, ಪ್ರಸ್ತುತ ಈಗಿನ ಸರ್ಕಾರವು ಸುವರ್ಣಗ್ರಾಮ ಯೋಜನೆ ಮತ್ತೆ ಮರು ಜಾರಿಗೊಳಿಸಿ, ಮತ್ತು ಈ ಯೋಜನೆ ಮೂಲಕ ಪ್ರತಿ ಗ್ರಾಮಪಂಚಾಯತಿ ಏಳಿಗೆಗಾಗಿ 1ಕೋಟಿ ರೂ.ಅನುದಾನ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.