Job Description: * ಜಗತ್ತಿನ ಅತ್ಯಂತ ಪ್ರಭಾವಶಾಲಿ ಪಾಸ್ಪೋರ್ಟ್ ಶ್ರೇಯಾಂಕದ ಪಟ್ಟಿಯನ್ನು ಹೆನ್ಲ ಆಯಂಡ್ ಪಾರ್ಟ್ನರ್ಸ್ ಪಾಸ್ಪೋರ್ಟ್ ಇಂಡೆಕ್ಸ್ 2021 ಬಿಡುಗಡೆ ಮಾಡಲಾಗಿದ್ದು, ಈ ಪಾಸ್ಪೋರ್ಟ್ ಶ್ರೇಯಾಂಕದ ಪಟ್ಟಿಯಲ್ಲಿ ಭಾರತದ ಪಾಸ್ಪೋರ್ಟ್ 58 ಅಂಕಗಳನ್ನು ಗಳಿಸಿ 85ನೇ ಸ್ಥಾನ ಪಡೆದುಕೊಂಡಿದೆ. * ಭಾರತವು ಈ ಅಂಕಗಳಿಂದ ಪೂರ್ವ ನಿಗದಿತ ವೀಸಾ ಇಲ್ಲದೆ 58 ದೇಶಗಳಿಗೆ ಪ್ರಯಾಣ ಮಾಡಲು ಅವಕಾಶ ನೀಡಿದೆ ಎಂದರ್ಥ. * ಪ್ರಸ್ತುತ ಜಪಾನ್ ದೇಶವು ಪಾಸ್ಪೋರ್ಟ್ ಶ್ರೇಯಾಂಕದ ಪಟ್ಟಿಯಲ್ಲಿ ನಂ.1 ಸ್ಥಾನ ಪಡೆದುಕೊಂಡಿದ್ದು, ಇದು 191 ಅಂಕಗಳನ್ನು ಪಡೆದು ಸತತ ಮೂರು ವರ್ಷಗಳಿಂದ ಪಾಸ್ಪೋರ್ಟ್ ಶ್ರೇಯಾಂಕದ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. * ಇನ್ನು ಸಿಂಗಾಪುರ ದೇಶವು 190 ಅಂಕಗಳನ್ನು ಪಡೆದುಕೊಂಡು ಎರಡನೇ ಸ್ಥಾನದಲ್ಲಿದೆ. * ದಕ್ಷಿಣ ಕೊರಿಯಾ ಮತ್ತು ಜರ್ಮನಿ, ಫಿನ್ಲಂಡ್, ಇಟಲಿ, ಲಕ್ಸೆಂಬರ್ಗ್ ಮತ್ತು ಸ್ಪೇನ್ ದೇಶಗಳು 3 ಮತ್ತು 4ನೇ ಸ್ಥಾನಪಡೆದುಕೊಡಿವೆ.