Job Description: * ಭಾರತೀಯ ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್ ಶೀಘ್ರದಲ್ಲೇ 'ಸೀ ವಿಜಿಲ್' ಎಂಬ ಹೆಸರಿನಲ್ಲಿ ಕರಾವಳಿ ಭದ್ರತಾ ಪಡೆಗಳ ಎರಡನೇ ಆವೃತ್ತಿಯ ಕರಾವಳಿ ಸಮರಾಭ್ಯಾಸ ಶುರುಮಾಡಲಿವೆ, ಎಂದು ಕಮಾಂಡ್ ಕೋಸ್ಟಲ್ ಸೆಕ್ಯೂರಿಟಿ ಅಧಿಕಾರಿ ಕ್ಯಾ.ಅಜಯ್ ಯಾದವ್ ತಿಳಿಸಿದ್ದಾರೆ. ಈ ವ್ಯಾಯಾಮದಿಂದ ದೇಶದ ಕರಾವಳಿ ರಕ್ಷಣಾ ಕಾರ್ಯವೈಖರಿ ಹೆಚ್ಚಿಸಲು ಮತ್ತು ಬಲಪಡಿಸುಲು ಅನುಕೂಲವಾಗಲಿದೆ. * ಪ್ರಸ್ತುತ ಈ ಎರಡನೇಯ ಆವೃತ್ತಿಯ ಕರಾವಳಿ ರಕ್ಷಣಾ ವ್ಯಾಯಾಮವನ್ನು ನೆಡೆಸುವದರಲ್ಲಿ ನೌಕಾ ದಳ, ಭಾರತೀಯ ವಾಯು ಸೇನೆ, ಕೋಸ್ಟ್ ಗಾರ್ಡ್, NSG, BSF, ಪೊಲೀಸ್, ಕಸ್ಟಂಮ್ಸ್, CISF, ಫಿಷರೀಸ್, ಡಿಜಿ ಶಿಪ್ಪಿಂಗ್, ಪೋರ್ಟ್ ಟ್ರಸ್ಟ್, SIDS, ಆಯಿಲ್ ಹ್ಯಾಂಡಲ್ಲಿಂಗ್ ಏಜೆನ್ಸಿಗಳು ಭಾಗವಹಿಸಲಿವೆ ಎಂದು ತಿಳಿದು ಬಂದಿದೆ.