Job Description: * ಸ್ವತಂತ್ರ ಭಾರತದ ಮೊದಲ ಬಜೆಟ್ 1947 ರ ನವೆಂಬರ್ 26 ರಂದು ಮಂಡನೆಯಾಗಿತ್ತು, ಅಲ್ಲಿಂದ ಇಲ್ಲಿಯವರೆಗೂ ಬಜೆಟ್ ಪುಸ್ತಕ ಮುದ್ರಣ ರೂಪದಲ್ಲಿ ನೀಡಲಾಗುತ್ತಿತ್ತು, ಪ್ರಸ್ತುತ ಕೇಂದ್ರ ಸರ್ಕಾರವು ಇದೆ ಮೊದಲ ಬಾರಿಗೆ ಕೋವಿಡ್ ಕಾರಣದ ಹಿನ್ನಲೆಯಿಂದಾಗಿ ಬಜೆಟ್ ಪುಸ್ತಕ ಮುದ್ರಣ ಮಾಡದಿರಲು ನಿರ್ಧರಿಸಿದೆ. * ಪ್ರಸ್ತುತ ಫೆಬ್ರವರಿ 1 ರಂದು ಕೇಂದ್ರ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿದ್ದು, ಹಾಗೂ ಕೇಂದ್ರ ಸರ್ಕಾರವು ಸಂಸತ್ ಸದಸ್ಯರಿಗೆ ಬಳಕೆಗೆ ಬಜೆಟ್ ಪುಸ್ತಕದ ಸಾಫ್ಟ್ ಕಾಪಿ, ಅಂದರೆ PDF ಫೈಲ್ ಒದಗಿಸಿಕೊಡಲಾಗುವದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.