Job Description: * ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಸುಧಾರಣೆಯ ಮೂರು ಕಾಯ್ದೆಗಳ ಜಾರಿಗೆಯನ್ನು ಸುಪ್ರೀಂ ಕೋರ್ಟ್ ತನ್ನ ಮುಂದಿನ ಆದೇಶದವರೆಗೆ ಕೃಷಿ ಕಾಯ್ದೆಗಳನ್ನೂ ತಡೆಹಿಡಿದಿದೆ. ಈ ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಯಿಂದ ಉಂಟಾಗಿರುವ ಬಿಕ್ಕಟ್ಟು ಪರಿಹಾರಕ್ಕೆ ನಾಲ್ಕು ಸದಸ್ಯರ ಸಮಿತಿಯನ್ನೂ ಸುಪ್ರೀಂ ಕೋರ್ಟ್ ರಚಿಸಿದೆ, ಇದು ರೈತರ ಸಮಸ್ಯೆಗಳಿಗೆ ದನಿಯಾಗಲಿದೆಯೆಂದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. * ರೈತರು ಈ ಕೃಷಿ ಬಿಕ್ಕಟ್ಟು ಪರಿಹಾರಕ್ಕೆ ಸಹಕರಿಸಬೇಕು ಮತ್ತು ವಿಚಾರಣೆಯ ವೇಳೆ ರೈತರು ಸಮಿತಿಯ ಮುಂದೆಹಾಜರಾಗಿ ತಮ್ಮ ಸಮಸ್ಯೆ ಹೇಳಿಕೊಳ್ಳಬೇಕು ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. ಕೃಷಿಯ ಮೂರು ಕಾಯ್ದೆಗಳು : * ಬೆಲೆ ಖಾತರಿ ಮತ್ತು ಕೃಷಿ ಸೇವೆಗಳಿಗೆ ರೈತರ ಒಪ್ಪಿಗೆ ಕಾಯ್ದೆ * ಕೃಷಿ ಉತ್ಪನ್ನಗಳ ವ್ಯಾಪಾರ ಮತ್ತು ಮಾರಾಟ ಕಾಯ್ದೆ * ಅಗತ್ಯ ವಸ್ತುಗಳ ಕಾಯ್ದೆ