Job Description: ➤ ಪ್ರಧಾನಿ ನರೇಂದ್ರ ಮೋದಿ ಅವರು 2026ರ ಜೂನ್ 27 ರಿಂದ ಜೂನ್ 29 ರವರೆಗೆ ಸೀಶೆಲ್ಸ್ ದೇಶಕ್ಕೆ 3 ದಿನಗಳ ಐತಿಹಾಸಿಕ ಪ್ರವಾಸ ಹಮ್ಮಿಕೊಂಡಿದ್ದಾರೆ. ಪರಿಸರ ಸಂರಕ್ಷಣೆ, ಸುಸ್ಥಿರ ಅಭಿವೃದ್ಧಿ (Sustainable Development) ಮತ್ತು ಹಸಿರು ಬೆಳವಣಿಗೆಗೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಗಮನಾರ್ಹ ಕೊಡುಗೆಯನ್ನು ಶ್ಲಾಘಿಸಿ, 2026ರ ಜೂನ್ 28ರ ಭಾನುವಾರದಂದು ಸೀಶೆಲ್ಸ್ ದೇಶವು ತನ್ನ ಅತ್ಯುನ್ನತ ಪ್ರಶಸ್ತಿಯಾದ 'ಗಾರ್ಡಿಯನ್ ಆಫ್ ದಿ ಬ್ಲೂ ಹೊರೈಜನ್' ನೀಡಿ ಗೌರವಿಸಿದೆ. ಇದು ಪ್ರಧಾನಿ ಮೋದಿಯವರು ವಿದೇಶಗಳಿಂದ ಪಡೆದ 34ನೇ ಅಂತರರಾಷ್ಟ್ರೀಯ ಗೌರವವಾಗಿದೆ. ➤ ಸೀಶೆಲ್ಸ್ ರಾಷ್ಟ್ರೀಯ ದಿನದ ಸುವರ್ಣ ಮಹೋತ್ಸವ: ಸೀಶೆಲ್ಸ್ ದೇಶವು ಬ್ರಿಟನ್‌ನಿಂದ ಸ್ವಾತಂತ್ರ್ಯ ಪಡೆದ (1976) ನೆನಪಿಗಾಗಿ ಆಚರಿಸಲಾಗುತ್ತಿರುವ ರಾಷ್ಟ್ರೀಯ ದಿನದ ಸುವರ್ಣ ಮಹೋತ್ಸವ (50ನೇ ವರ್ಷದ ಆಚರಣೆ) ಕಾರ್ಯಕ್ರಮದಲ್ಲಿ ಜೂನ್ 29ರ ಸೋಮವಾರದಂದು ಪ್ರಧಾನಿ ಮೋದಿ ಅವರು ಮುಖ್ಯ ಅತಿಥಿಯಾಗಿ (Guest of Honour) ಪಾಲ್ಗೊಂಡಿದ್ದಾರೆ. ಇದು ಭಾರತ ಮತ್ತು ಸೀಶೆಲ್ಸ್ ನಡುವಿನ ರಾಜತಾಂತ್ರಿಕ ಬಾಂಧವ್ಯದ 50ನೇ ವರ್ಷದ ಸಂಭ್ರಮವೂ ಆಗಿದೆ. ➤ ತಮ್ಮ ಪ್ರವಾಸದ ಎರಡನೇ ದಿನವಾದ ಜೂನ್ 28 ರಂದು ಪ್ರಧಾನಿ ಮೋದಿ ಅವರು ಸೀಶೆಲ್ಸ್ ದೇಶದ ರಾಷ್ಟ್ರೀಯ ಅಸೆಂಬ್ಲಿಯನ್ನು (National Assembly) ಉದ್ದೇಶಿಸಿ ಮಾತನಾಡಿದರು. ಈ ಮೂಲಕ ಸೀಶೆಲ್ಸ್ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಮೊದಲ ಭಾರತೀಯ ಪ್ರಧಾನಿ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ನರೇಂದ್ರ ಮೋದಿ ಪಾತ್ರರಾಗಿದ್ದಾರೆ. ➤ ರಕ್ಷಣಾ ಮತ್ತು ಕಡಲ ಪಾಲುದಾರಿಕೆ ಬಲವರ್ಧನೆ (ಜೂನ್ 27, 2026): ಹಿಂದೂ ಮಹಾಸಾಗರ ಪ್ರದೇಶದಲ್ಲಿ (Indian Ocean Region) ಸುರಕ್ಷತೆ, ಶಾಂತಿ ಮತ್ತು ಸಮೃದ್ಧಿಯನ್ನು ವೃದ್ಧಿಸುವ ಭಾರತದ 'SAGAR/MAHASAGAR' ದೃಷ್ಟಿಕೋನಕ್ಕೆ ಈ ಭೇಟಿ ಮತ್ತಷ್ಟು ವೇಗ ನೀಡಿದೆ. ಪ್ರವಾಸದ ಮೊದಲ ದಿನವಾದ ಜೂನ್ 27 ರಂದು ಭಾರತವು ಸೀಶೆಲ್ಸ್‌ಗೆ ಈ ಕೆಳಗಿನ ರಕ್ಷಣಾ ಹಾಗೂ ವೈದ್ಯಕೀಯ ನೆರವನ್ನು ಹಸ್ತಾಂತರಿಸಿದೆ: ಪಿಎಸ್ ಲೆಸ್‌ಗ್ವಾರ್ (PS Lespwar): ಗೋವಾ ಶಿಪ್‌ಯಾರ್ಡ್ ಲಿಮಿಟೆಡ್ ನಿರ್ಮಿಸಿದ ಭಾರತದಲ್ಲೇ ತಯಾರಿಸಿದ ಅತ್ಯಾಧುನಿಕ ಗಸ್ತು ನೌಕೆಯನ್ನು ಸೀಶೆಲ್ಸ್‌ಗೆ ಹಸ್ತಾಂತರಿಸಲಾಗಿದೆ. ಉಡುಗೊರೆಗಳು: ಇದರೊಂದಿಗೆ 6 ಆಂಬ್ಯುಲೆನ್ಸ್‌ಗಳು, 10 ಯುಟಿಲಿಟಿ ವಾಹನಗಳು ಮತ್ತು 5 ಲೇಸರ್ ಬೋಟ್‌ಗಳನ್ನು ಉಡುಗೊರೆಯಾಗಿ ನೀಡಲಾಗಿದೆ.