Job Description: ಅಹ್ಮದಾಬಾದ್ನಲ್ಲಿ ನಿರ್ಮಾಣಗೊಂಡ 'ಸರ್ದಾರ್ ಪಟೇಲ್ ಮೊಟೇರಾ ಸ್ಟೇಡಿಯಂ’ನಲ್ಲಿ ಹಗಲು-ರಾತ್ರಿ ಟೆಸ್ಟ್ ಪಂದ್ಯವನ್ನು ಮುಂದಿನ ವರ್ಷ ಭಾರತ-ಇಂಗ್ಲೆಂಡ್ ನಡುವೆ ಆಯೋಜಿಸಲು ಬಿಸಿಸಿಐ ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. * ಭಾರತ-ಬಾಂಗ್ಲಾದೇಶ ನಡುವೆ ಹಗಲು-ರಾತ್ರಿ ಟೆಸ್ಟ್ ಕಳೆದ ವರ್ಷ ಈಡನ್ ಗಾರ್ಡನ್ಸ್ನಲ್ಲಿ ನಡೆದಿತ್ತು. ಇದೀಗ ಭಾರತದ ಆತಿಥ್ಯದಲ್ಲಿ ನಡೆಯುವ ದ್ವಿತೀಯ ಪಿಂಕ್ ಬಾಲ್ ಟೆಸ್ಟ್ ಫೆ. 24ರಿಂದ ಅಹ್ಮದಾಬಾದ್ ಡೇ-ನೈಟ್ ಟೆಸ್ಟ್ ಆರಂಭವಾಗಲಿದೆ. * ಮೊಟೆರಾ ಕ್ರೀಡಾಂಗಣವನ್ನು 800 ಕೋಟಿ ರೂ ವೆಚ್ಚದಲ್ಲಿ ಪುನರ್ ನಿರ್ಮಾಣ ಮಾಡಿ ಸರ್ದಾರ್ ಪಟೇಲ್ ಕ್ರೀಡಾಂಗಣ ಎಂದು ಹೆಸರಿಸಲಾಗಿದೆ. ಇದೀಗ ಈ ಕ್ರೀಡಾಂಗಣ ವಿಶ್ವದ ಬೃಹತ್ ಕ್ರಿಕೆಟ್ ಸ್ಟೇಡಿಯಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಕ್ರೀಡಾಂಗಣವು ಒಟ್ಟು 1.10 ಲಕ್ಷ ವೀಕ್ಷಕರ ಸಾಮರ್ಥ್ಯ ಹೊಂದಿದೆ.