Job Description: ➤ ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ದೇಶದ ಮಕ್ಕಳ ಆರೋಗ್ಯ ರಕ್ಷಣೆ ಮತ್ತು ಆರಂಭಿಕ ಬೆಳವಣಿಗೆಗೆ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ 16ನೇ CCHFW ಸಮ್ಮೇಳನದಲ್ಲಿ 'ಸಮಗ್ರ ಶಿಶು ಬಾಲ ಸ್ವಾಸ್ಥ್ಯ ಕಾರ್ಯಕ್ರಮ'ಕ್ಕೆ (Samagra Shishu Bal Swasthya Karyakram - SSBSK) ಅಧಿಕೃತವಾಗಿ ಚಾಲನೆ ನೀಡಿದ್ದಾರೆ.➤ ಸಮಗ್ರ ಶಿಶು ಬಾಲ ಸ್ವಾಸ್ಥ್ಯ ಕಾರ್ಯಕ್ರಮ (SSBSK): ಈ ಯೋಜನೆಯು ಈ ಹಿಂದೆ ಜಾರಿಯಲ್ಲಿದ್ದ ಸರ್ಕಾರದ ಎರಡು ಪ್ರಮುಖ ಕಾರ್ಯಕ್ರಮಗಳಾದ ಮನೆ ಆಧಾರಿತ ನವಜಾತ ಶಿಶು ಆರೈಕೆ (HBNC) ಮತ್ತು ಯುವ ಮಕ್ಕಳ ಮನೆ ಆಧಾರಿತ ಆರೈಕೆ (HBYC) ಯೋಜನೆಗಳನ್ನು ಒಟ್ಟುಗೂಡಿಸಿ ಸಿದ್ಧಪಡಿಸಲಾದ ಒಂದು ಏಕೀಕೃತ ರಾಷ್ಟ್ರೀಯ ಕಾರ್ಯಕ್ರಮವಾಗಿದೆ. ಮಗುವಿನ ಜನನದಿಂದ ಮೊದಲ 3 ವರ್ಷಗಳ ಅವಧಿಯು ಮೆದುಳಿನ ಬೆಳವಣಿಗೆ ಮತ್ತು ಪೋಷಣೆಗೆ ಅತ್ಯಂತ ನಿರ್ಣಾಯಕವಾಗಿದ್ದು, ಈ ಅವಧಿಯಲ್ಲಿ ನಿರಂತರ ನಿಗಾ ವಹಿಸುವುದು ಯೋಜನೆಯ ಮೂಲ ಉದ್ದೇಶವಾಗಿದೆ.➤ ಅಪಾಯದ ಮುನ್ಸೂಚನೆ ಇರುವ ಮಕ್ಕಳಿಗೆ (At-Risk Children) ವಿಶೇಷ ಆದ್ಯತೆ: ಕಡಿಮೆ ತೂಕದೊಂದಿಗೆ ಜನಿಸಿದ ಶಿಶುಗಳು, ಅವಧಿಗೆ ಮುನ್ನ ಜನಿಸಿದ ಮಕ್ಕಳು (Premature), ಅಪೌಷ್ಟಿಕತೆ ಎದುರಿಸುತ್ತಿರುವ ಮತ್ತು ಬೆಳವಣಿಗೆಯಲ್ಲಿ ವಿಳಂಬ ಕಾಣಿಸುವ ಮಕ್ಕಳಿಗೆ ಈ ಯೋಜನೆಯಡಿ ವಿಶೇಷ ನಿಗಾ ವಹಿಸಲಾಗುತ್ತದೆ.➤ ಸಮಗ್ರ ಶಿಶು ಬಾಲ ಸ್ವಾಸ್ಥ್ಯ ಕಾರ್ಯಕ್ರಮವು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ನವಜಾತ ಶಿಶುಗಳ ಮೊದಲ 36 ತಿಂಗಳ ದೈಹಿಕ-ಮಾನಸಿಕ ಬೆಳವಣಿಗೆಯನ್ನು ನಿರಂತರ ಮನೆ ಭೇಟಿ, ಶಿಶು ಶಿಬಿರಗಳು ಮತ್ತು ತಾಯಿಯ ಮಾನಸಿಕ ಆರೋಗ್ಯ ತಪಾಸಣೆಯ ಮೂಲಕ ಸಮಗ್ರವಾಗಿ ಮೇಲ್ವಿಚಾರಣೆ ಮಾಡುವ ಯೋಜನೆಯಾಗಿದೆ.➤ SSBSK ಯೋಜನೆಯಡಿ ಮಕ್ಕಳನ್ನು ಡಿಜಿಟಲ್ ರೂಪದಲ್ಲಿ ಟ್ರ್ಯಾಕ್ ಮಾಡಲು ನಿರ್ಧಾರ-ಬೆಂಬಲ ವ್ಯವಸ್ಥೆ (Decision-Support Systems) ಮತ್ತು ಅಲರ್ಟ್ ಮೆಕ್ಯಾನಿಸಂಗಳನ್ನು ಬಳಸಲಾಗುತ್ತದೆ. ಇದನ್ನು ಸರ್ಕಾರದ ಪ್ರಮುಖ ಪೋರ್ಟಲ್‌ಗಳಾದ ಜನನಿ ಪೋರ್ಟಲ್, U-WIN ಪೋರ್ಟಲ್, ಪೋಷಣ್ ಟ್ರ್ಯಾಕರ್ (POSHAN Tracker) ಮತ್ತು Baal-ABHA ID ಗಳೊಂದಿಗೆ ಲಿಂಕ್ ಮಾಡಲಾಗುತ್ತದೆ.➤ ಆಧುನಿಕ ಯುಗದಲ್ಲಿ ಮಕ್ಕಳು ಅತಿಯಾಗಿ ಮೊಬೈಲ್/ಟಿವಿ ಸ್ಕ್ರೀನ್ ನೋಡುವುದರಿಂದ (Screen Time) ಅವರ ಮೆದುಳಿನ ಬೆಳವಣಿಗೆಯ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಪೋಷಕರಲ್ಲಿ ಜಾಗೃತಿ ಮೂಡಿಸುವುದು ಕೂಡ ಈ ಯೋಜನೆಯ ಮಾರ್ಗಸೂಚಿಯಲ್ಲಿದೆ.ಪ್ರತಿ ದಿನದ ಉದ್ಯೋಗ ಮಾಹಿತಿ ಅಪ್ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ