Job Description: ನಾಡಿನ ಹಿರಿಯ ಸಾಹಿತಿ, ಸರಸ್ವತಿ ಸಮ್ಮಾನ್ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಎಸ್.ಎಲ್ ಭೈರಪ್ಪ ರವರ ಕಾದಂಬರಿ 'ಪರ್ವ'ವನ್ನು ಕೇಂದ್ರ ಸಾಹಿತ್ಯ ಅಕಾಡೆಮಿಯು ಚೀನಿ ಹಾಗೂ ರಷ್ಯನ್ ಭಾಷೆಗಳಿಗೆ ಭಾಷಾಂತರ ಮಾಡಿದೆ * ಪರ್ವ ಕಾದಂಬರಿವು 1979ರಲ್ಲಿ ಮೊದಲು ಮುದ್ರಣ ಕಂಡು, ನಂತರ 23 ಬಾರಿ ಮರು ಮುದ್ರಣಗೊಂಡು ಅಪಾರ ಜನಪ್ರಿಯತೆಗೆ ಪಡೆದುಕೊಂಡಿದೆ. ಭಾರತದ ಕಲೆ ಹಾಗೂ ಸಂಸ್ಕೃತಿಯನ್ನು ಪರಿಚಯಿಸುವ ದೃಷ್ಟಿಯಿಂದ ಭಾರತದ 10 ಕೃತಿಗಳನ್ನು ಇತರ ದೇಶದ ಭಾಷೆಗಳಿಗೆ ಭಾಷಾಂತರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚಿಗೆ ಆದೇಶ ನೀಡಿದ್ದರು. * ಸಾಹಿತಿ ಎಸ್.ಎಲ್ ಭೈರಪ್ಪರವರು ದೇಶ ದೇಶಗಳ ನಡುವೆ ಸಾಹಿತ್ಯದ ಮೂಲಕ ಸಾಂಸ್ಕೃತಿಕ ವಿನಿಮಯ ಆಗುತ್ತಿರುವುದು ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆಯಾಗಲಿದೆ, 'ರಷ್ಯಾ ಮತ್ತು ಚೀನಾ' ಭಾಷೆಗಳಿಗೆ ಪರ್ವ'ಅನುವಾದ ಗೊಂಡಿರುವುದು ಸಂತಸ ತಂದಿದೆ ಎಂದು ಹೇಳಿದರು