Job Description: * 2021ರ ಜನವರಿಯಿಂದ ಪ್ರತಿ ತಿಂಗಳು 5,000 ರೂ ವಿದ್ಯಾರ್ಥಿವೇತನವನ್ನು ಜಾನಪದ ಕಲಾವಿದರು, ವರ್ಣಚಿತ್ರಕಾರರು ಮತ್ತು ಶಿಲ್ಪಿಗಳಿಗೆ ನೀಡುವುದಾಗಿ ಉತ್ತರ ಪ್ರದೇಶ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಪ್ರಸ್ತಾಪವನ್ನು ಲಲಿತ ಕಲಾ ಅಕಾಡೆಮಿ ಸರ್ಕಾರಕ್ಕೆ ವರ್ಗಾಯಿಸಿದೆ. * ಸಂಶೋಧನೆ ಮಾಡುತ್ತಿರುವ ಗರಿಷ್ಠ 40 ವರ್ಷ ವಯಸ್ಸಿನ ಜಾನಪದ ಕಲಾವಿದರನ್ನು ಪ್ರೋತ್ಸಾಹಿಸಲು ಈ ವಿದ್ಯಾರ್ಥಿವೇತನವನ್ನು ಪ್ರಾರಂಭಿಸಲಾಗಿದೆ. ಹಾಗೂ ಸಂಶೋಧನೆ ನಡೆಸುವ ಕಲಾವಿದರಿಗೆ ಚಿತ್ರಕಲೆ ಮತ್ತು ಶಿಲ್ಪಕಲಾ ಪ್ರದರ್ಶನಕ್ಕಾಗಿ 10,000 ರೂ ಪ್ರೋತ್ಸಾಹ ಧನ ನೀಡಲಾಗುತ್ತಿದೆ. * ಲಲಿತ ಕಲಾ ಅಕಾಡೆಮಿ ಇಂದ ಉತ್ತರ ಪ್ರದೇಶ ಜಾನಪದ ಕಲಾವಿದರನ್ನು ಆಕರ್ಷಿಸಿಸುವದರ ಜೊತೆಗೆ ಕಲಾವಿದರಿಗೆ ಸರಿಯಾದ ವೇದಿಕೆ ಹಾಗೂ ಪ್ರೋತ್ಸಾಹವೂ ಸಿಗುತ್ತಿದೆ, ಎಂದು ಲಲಿತ ಕಲಾ ಅಕಾಡೆಮಿಯ ಕಾರ್ಯದರ್ಶಿ ಯಶ್ವಂತ್ ಸಿಂಗ್ ರಾಥೋಡ್ ತಿಳಿಸಿದ್ದಾರೆ.