Job Description: 2015 ರಲ್ಲಿ ನರೇಂದ್ರ ಮೋದಿ ಹಾಗೂ ಜಪಾನ್ ಪ್ರಧಾನಿ ಶಿಂಜೋ ಅಬೆ ರವರು ವಾರಾಣಸಿಯ ದೇವಾಲಯಕ್ಕೆ ಭೇಟಿ ನೀಡಿ ಬೃಹತ್ ಸಮಾವೇಶ ಕೇಂದ್ರ "ರುದ್ರಾಕ್ಷ"ಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು. ಇದೀಗ ಈ ವಿಶ್ವದರ್ಜೆಯ ರುದ್ರಾಕ್ಷ ಸಮಾವೇಶ ಕೇಂದ್ರ ಶೀಘ್ರವೇ ಅಸ್ತಿತ್ವಕ್ಕೆ ಬರಲಿದೆ. ಈ ಕೇಂದ್ರದಲ್ಲಿ ಸಂಗೀತ, ನಾಟಕ, ಪ್ರದರ್ಶನಗಳು ನಡೆಯಲಿವೆ, ಈ ಸಮಾವೇಶ ಕೇಂದ್ರದಲ್ಲಿ 108 ರುದ್ರಾಕ್ಷಿಗಳನ್ನು ಸ್ಥಾಪಿಸಲಾಗುತ್ತದೆ. ರುದ್ರಾಕ್ಷ ನಿರ್ಮಾಣದ ಯೋಜನೆಯನ್ನುಜಪಾನ್ ನ ಸಂಸ್ಥೆ ಫುಜಿತಾ ಕಾರ್ಪೊರೇಷನ್ ನಿರ್ವಹಿಸಲಿದ್ದು ಇದು 3 ಎಕರೆ ಪ್ರದೇಶದಲ್ಲಿ, 186 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಲಿದ್ದು 1,200 ಮಂದಿ ಈ ಕಾರ್ಯಕ್ರಮಗಳನ್ನು ವೀಕ್ಷಿಸುವ ಸಾಮರ್ಥ್ಯ ಹೊಂದಿದೆ. 2018 ರಲ್ಲಿ ಪ್ರಾರಂಭವಾದ ಕಾಮಗಾರಿ 2021 ಕ್ಕೆ ಪೂರ್ಣಗೊಳ್ಳಲಿದ್ದು, ಪ್ರಧಾನಿ ಮೋದಿಯವರು ರುದ್ರಾಕ್ಷ ಲೋಕಾರ್ಪಣೆ ಮಾಡುವ ಸಾಧ್ಯತೆ ಇದೆ.