Job Description: ಇದೆ ಡಿಸೆಂಬರ್ 17ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪೋಲಾರ್ ಉಪಗ್ರಹ ಉಡಾವಣಾ ವಾಹನ ಬಳಸಿ ಸಂವಹನ ಉಪಗ್ರಹ ಸಿಎಂಎಸ್-01 ಅನ್ನು ಉಡಾವಣೆ ಮಾಡಲಾಗುವದು ಎಂದು ಇಸ್ರೋ ಶುಕ್ರವಾರ ಮಾಹಿತಿ ನೀಡಿದೆ. * ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಎರಡನೆಯ ಉಡಾವಣಾ ಘಟಕದಿಂದ ಸಿಎಂಎಸ್-01ಅನ್ನು ಉಡಾವಣೆ ಮಾಡಲಾಗುವುದು. ಇದು ಪಿಎಸ್ಎಲ್ವಿ 52ನೇ ಯೋಜನೆಯಾಗಿದೆ. * ಸಿಎಂಎಸ್-01 ಭಾರತದ 42ನೇ ಸಂವಹನ ಉಪಗ್ರಹವಾಗಿದ್ದು, ಶ್ರೀಹರಿಕೋಟಾದ ಸತೀಶ್ ಧವನ್ ಎಸ್ಎಚ್ಎಆರ್ನಿಂದ ಉಡಾವಣೆಯಾಗುತ್ತಿರುವ 77ನೇ ಉಡ್ಡಯನ ವಾಹನವಾಗಲಿದೆ. ಇದರಿಂದ ವಿಸ್ತೃತ ಸಿ-ಬ್ಯಾಂಡ್ ಭಾರತದ ಮುಖ್ಯಭೂಮಿ, ಅಂಡಮಾನ್ ನಿಕೋಬಾರ್ ಮತ್ತು ಲಕ್ಷದ್ವೀಪಗಳಲ್ಲಿ ಸಂವಹನಕ್ಕೆ ನೆರವಾಗುತ್ತದೆ.