Job Description: ಹಿಂದೂ ಮಹಾಸಾಗರ ವ್ಯಾಪ್ತಿಯಲ್ಲಿನ ಆಯಕಟ್ಟಿನ ನೆಲೆಗಳ ಮೇಲೆ ಹಿಡಿತ ಸಾಧಿಸುಲು 120ಕ್ಕೂ ಅಧಿಕ ಯುದ್ಧನೌಕೆಗಳನ್ನು ನಿಯೋಜನೆ ಮಾಡಲಾಗಿದೆ ಎಂದು ರಕ್ಷಣಾ ಸಿಬ್ಬಂದಿ ಮುಖ್ಯಸ್ಥರಾದ ಬಿಪಿನ್ ರಾವತ್ ರವರು ತಿಳಿಸಿದ್ದಾರೆ. ಇತ್ತೀಚಿಗೆ ನಡೆದ ಜಾಗತಿಕ ಭದ್ರತಾ ಶೃಂಗಸಭೆಯ ವೆಬಿನಾರ್ನಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ. 120ಕ್ಕೂ ಅಧಿಕ ಯುದ್ಧನೌಕೆಗಳು ಹಿಂದೂ ಮಹಾಸಾಗರ ವ್ಯಾಪ್ತಿಯಲ್ಲಿ ವಿವಿಧ ಯೋಜನೆಗಳ ಭಾಗವಾಗಿ ಹಲವು ರಾಷ್ಟ್ರಗಳು ನಿಯೋಜಿಸಿರುವುದಾಗಿ ಅವರು ತಿಳಿಸಿದರು. ಶಾಂತಿ ಮತ್ತು ಸುಸ್ಥಿರ ಭದ್ರತೆಯ ಪರಿಸರ ನಿರ್ಮಾಣದ ಜೊತೆಗೆ ಸದೃಢ ಭಾರತ ನಿರ್ಮಿಸುವ ಅನಿವಾರ್ಯತೆ ಎದುರಿದೆ ಎಂದು ಬಿಪಿನ್ ರಾವತ್ ರವರು ತಿಳಿಸಿದ್ದಾರೆ.