Job Description: ಭಾರತ ಫುಟ್ಬಾಲ್ ತಂಡದಲ್ಲಿ ಆಡಿದ್ದ ಕರ್ನಾಟಕದ ಧರ್ಮಲಿಂಗಮ್ ಯತಿರಾಜ್ ತಮ್ಮ 89 ನೇ ವಯಸ್ಸಿನಲ್ಲಿ ನಿಧನರಾದರು. * ಧರ್ಮಲಿಂಗಮ್ ಯತಿರಾಜ್ ರವರು ಕರ್ನಾಟಕ ತಂಡದ ಪರ ಸಂತೋಷ್ ಟ್ರೋಫಿ ಫುಟ್ಬಾಲ್ ಟೂರ್ನಿ, ಡುರಾಂಡ್ ಕಪ್, ರೋವರ್ಸ್ ಕಪ್ ಹಾಗೂ ಸ್ಟಾಫರ್ಡ್ ಕಪ್ ಟೂರ್ನಿಗಳಲ್ಲಿ ಭಾಗವಹಿಸಿದ್ದರು. * 1962ರಲ್ಲಿ ನಡೆದ ಏಷ್ಯನ್ ಗೇಮ್ಸ್ನ ಕ್ರೀಡಾಕೂಟದಲ್ಲಿ ಭಾರತ ತಂಡವು ಚಿನ್ನದ ಪದಕ ಮುಡಿಗೇಸರಿಸಿಕೊಂಡಿತು. * ಕರ್ನಾಟಕ ರಾಜ್ಯ ತಂಡಕ್ಕೆ ಆಯ್ಕೆಗಾರ ಹಾಗೂ ಕೋಚ್ ಆಗಿಯೂ ಇವರು ಕಾರ್ಯನಿರ್ವಹಿಸಿದ್ದರು. ಅಲ್ಲದೆ ರಾಜ್ಯ ಫುಟ್ಬಾಲ್ ಸಂಸ್ಥೆಯು ಇವರಿಗೆ ಗೌರವ ಆಜೀವ ಸದಸ್ಯತ್ವ ನೀಡಿತ್ತು.