Job Description: ಭಾರತೀಯ ನರ್ತಕ ಅಸ್ತಾದ್ ಡೆಬೂ ರವರು ತಮ್ಮ 73ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ. ಇವರು ಕಥಕ್ ಹಾಗೂ ಕಥಕ್ಕಲಿಯನ್ನ ವಿಶಿಷ್ಟ ರೂಪದಲ್ಲಿ ಒಂದುಗೂಡಿಸಿ ಹೊಸ ನೃತ್ಯ ಕಂಡುಹಿಡಿದರು. ಅಸ್ತಾದ್ ಡೆಬೂ ಗುಜರಾತ್ನ ಸವಾಸರಿ ಪಟ್ಟಣದಲ್ಲಿ ಜನಿಸಿದರು, ಇವರು ಕಥಕ್ ಹಾಗೂ ಕಥಕ್ಕಲಿ ಎರಡು ನೃತ್ಯ ಪ್ರಕಾರಗಳನ್ನು ಅಭ್ಯಾಸ ಮಾಡಿದ್ದರು, ಬಳಿಕ ಎರಡನ್ನು ಒಂದುಗೂಡಿಸಿ ಹೊಸ ನೃತ್ಯ ಪ್ರಕಾರವನ್ನೇ ಕಂಡು ಹಿಡಿದ ಹೆಗ್ಗಳಿಕೆ ಇವರಿಗೆ ಸೇರುತ್ತದೆ. ಭಾರತೀಯ ಹಾಗೂ ಪಾಶ್ಚಾತ್ಯ ಪರಂಪರೆಯನ್ನ ಒಂದುಗೂಡಿಸಿ ರಚಿಸಿದ ವಿನೂತನ ಶೈಲಿ ಭಾರತೀಯ ನೃತ್ಯ ಈಗಲೂ ಹೆಸರುವಾಸಿಯಾಗಿದೆ.