Job Description: 2024ರಲ್ಲಿ ನಾಸಾದ ಕೈಗೊಳ್ಳಲಿರುವ ಚಂದ್ರಯಾನ ಕಾರ್ಯಕ್ರಮಕ್ಕೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ 'ನಾಸಾ'ವು ಒಟ್ಟು 18 ಗಗನಯಾನಿಗಳನ್ನು ಆಯ್ಕೆ ಮಾಡಿದ್ದು, ಇದರಲ್ಲಿ ಅರ್ಧದಷ್ಟು ಮಹಿಳೆಯರು ಇರುವುದು ಖಚಿತವಾಗಿದೆ. * ಈ ಯೋಜನೆಯಲ್ಲಿ ಚಂದ್ರನ ಮೇಲೆ ಮೊದಲು ಮಹಿಳಾ ಗಗನಯಾನಿಯೇ ಕಾಲಿಡುವ ಸಾಧ್ಯತೆಯಿದೆ ಎಂದು "ಆರ್ಟೆಮಿಸ್" ಹೆಸರಿನ ಈ ಕಾರ್ಯಕ್ರಮದಲ್ಲಿ ನ್ಯಾಷನಲ್ ಸ್ಪೇಸ್ ಕೌನ್ಸಿಲ್ನ ಚೇರಮನ್ ಆಗಿರುವ ಅಮೆರಿಕದ ಉಪಾಧ್ಯಕ್ಷ ಮೈಕ್ ಪೆನ್ಸ್ ಅವರು ತಿಳಿಸಿದ್ದಾರೆ. * ಇನ್ನು ನಾಸಾದ ಆಡಳಿತಾಧಿಕಾರಿ ಜಿಮ್ ಬ್ರೈಡೆನ್ಸ್ಟಿನ್ ರವರು 'ಈ ಚಂದ್ರಯಾನ ಕಾರ್ಯಕ್ರಮಕ್ಕೆ ಇನ್ನಷ್ಟು ಗಗನಯಾನಿಗಳು ಸೇರ್ಪಡೆಯಾಗುವ ಸಾಧ್ಯತೆ ಕುರಿತು ತಿಳಿಸಿದ್ದಾರೆ.