Job Description: ಕನ್ನಡ ಭಾಷೆಯನ್ನು ಅಮೆರಿಕಾದ ಸರ್ಕಾರಿ ಹೈಸ್ಕೂಲುಗಳಲ್ಲಿ ಅಧಿಕೃತ ವಿದೇಶಿ ಭಾಷೆಯಾಗಿ ಕಲಿಸುವ ಕಾರ್ಯ ಆರಂಭವಾಗಿದೆ. ಕಳೆದ 15 ವರ್ಷಗಳಿಂದ ಅಮೆರಿಕದಲ್ಲಿರುವ ಕನ್ನಡ ಪ್ರೇಮಿಗಳ ಸತತ ಪ್ರಯತ್ನದಿಂದಾಗಿ ಇದೆ ಮೊಟ್ಟಮೊದಲ ಬಾರಿಗೆ, ಕನ್ನಡ ಭಾಷೆಯನ್ನು ನಾರ್ತ್ ಕ್ಯಾರೊಲಿನ ರಾಜ್ಯದ ವೇಕ್ ಕೌಂಟಿ ಸರ್ಕಾರಿ ಹೈಸ್ಕೂಲಿನಲ್ಲಿ ವಿದೇಶಿ ಭಾಷೆಯಾಗಿ ಕಲಿಯುವ ಅವಕಾಶ ಇಲ್ಲಿನ ವಿದ್ಯಾರ್ಥಿಗಳಿಗೆ ಒದಗಿಬಂದಿದೆ. ಇನ್ನು ಕನ್ನಡ ಶಾಲೆಗಳನ್ನು ನಡೆಸಲು ಬೇಕಾದ ವೆಬ್ಸೈಟ್, ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿ ಅಮೇರಿಕದ ತುಂಬೆಲ್ಲಾ ಕನ್ನಡ ಕಲಿ ಶಾಲೆಗಳು ನಡೆಯಲು ಕನ್ನಡ ಅಕ್ಯಾಡೆಮಿಯ ಇತರೆ ಸ್ವಯಂ ಸೇವಕರು ಶ್ರಮಿಸುತ್ತಿದ್ದಾರೆ.