Job Description: ಅಮೆರಿಕದ ವಾಯುಪಡೆ ಅಧಿಕಾರಿ ಚಕ್ ಯೇಗರ್ ಅವರು ಇತ್ತೀಚಿಗೆ ತಮ್ಮ 97ನೇ ವಯಸ್ಸಿನಲ್ಲಿ ನಿಧನರಾದರು. ಚಕ್ ಯೇಗರ್ ಅವರು ವಿಮಾನವನ್ನು ಶಬ್ದಕ್ಕಿಂತ ವೇಗವಾಗಿ ಚಲಾಯಿಸಿದ ವಿಶ್ವದ ಮೊದಲ ವ್ಯಕ್ತಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ, ಹಾಗೂ ಟೆಸ್ಟ್ ಪೈಲಟ್ ಆಗಿದ್ದ ಅವರು ಎರಡನೇ ಮಹಾಯುದ್ಧದಲ್ಲಿ ಭಾಗಿಯಾಗಿದ್ದರು. # 1941ರ ಸೆಪ್ಟೆಂಬರ್ನಲ್ಲಿ ಯೇಗರ್ ವಾಯುಪಡೆಗೆ ಸೇರಿದ್ದರು. ನಂತರ 1947ರಲ್ಲಿ ಬೆಲ್ x-1 ಸಂಶೋಧನಾ ವಿಮಾನವನ್ನು ಅವರು ಶಬ್ದಕ್ಕಿಂತಲೂ ವೇಗವಾಗಿ ಚಲಾಯಿಸಿದ್ದರು. ಇವರು 1975ರಲ್ಲಿ ವಾಯುಪಡೆ ಸೇವೆಯಿಂದ ನಿವೃತ್ತರಾಗಿದ್ದರು. # ಚಕ್ ಯೇಗರ್ ಅವರ ಯಶೋಗಾಥೆಯನ್ನು ಆಧರಿಸಿ 'ದಿ ರೈಟ್ ಸ್ಟಫ್' ಎಂಬ ಕೃತಿ ಬಿಡುಗಡೆಯಾಗಿದೆ, ಅಲ್ಲದೆ 1983ರಲ್ಲಿ ಇದೇ ಹೆಸರಿನಲ್ಲಿ ಚಲನಚಿತ್ರ ತೆರೆಕಂಡಿತ್ತು.