Job Description: # ದೆಹಲಿ ವಾರಣಾಸಿ ಹೈ ಸ್ಪೀಡ್ ರೈಲು ಕಾರಿಡಾರ್ಗೆ ಭೂ ಸಮೀಕ್ಷೆ ನಡೆಸಲು ಭಾರತೀಯ ರೈಲ್ವೆ ಲಿಡಾರ್ ತಂತ್ರವನ್ನು ಬಳಸಲಾಗುತ್ತಿದೆ. ಲಿಡಾರ್ ತಂತ್ರಜ್ಞಾನ ಒಂದು ಲೈಟ್ ಡಿಟೆಕ್ಷನ್ ಮತ್ತು ರೇಂಜಿಂಗ್ ತಂತ್ರವಾಗಿದೆ. # ಹೆಲಿಕಾಪ್ಟರ್ನಲ್ಲಿ ಅಳವಡಿಸಲಾಗಿರುವ ಲಿಡಾರ್ ಈ ತಂತ್ರವನ್ನು ಭಾರತೀಯ ರೈಲ್ವೆ ಮುಂಬೈ ಅಹಮದಾಬಾದ್ ಬುಲೆಟ್ ರೈಲು ಯೋಜನೆಯಲ್ಲಿ ಮೊದಲ ಬಾರಿಗೆ ಬಳಕೆ ಮಾಡಲಾಯಿತು, ಈ ಬಳಕೆ ಯಶಸ್ವಿಯಾದ ನಂತರ ಇದನ್ನು ಬಳಸಲಾಗುತ್ತಿದೆ. # ನಿಖರವಾದ ಸಮೀಕ್ಷೆಯನ್ನು ನೀಡಲು ತಂತ್ರವು ಜಿಪಿಎಸ್ ಡೇಟಾ, ಲೇಸರ್ ಡೇಟಾ, ಫ್ಲೈಟ್ ನಿಯತಾಂಕಗಳ ಸಂಯೋಜನೆಯನ್ನು ಬಳಸುತ್ತದೆ. # ಲಿಡಾರ್ ಉಪಕರಣವು ಸ್ಕ್ಯಾನರ್, ಲೇಸರ್ ಮತ್ತು ಜಿಪಿಎಸ್ ರಿಸೀವರ್ ಅನ್ನು ಒಳಗೊಂಡಿದೆ. ಲಿಡಾರ್ ಡೇಟಾವನ್ನು ಪಡೆಯಲು ಹೆಲಿಕಾಪ್ಟರ್ಗಳು ಮತ್ತು ವಿಮಾನಗಳು ಸಾಮಾನ್ಯವಾಗಿ ಬಳಸುವ ವೇದಿಕೆಗಳಾಗಿವೆ