Job Description: ಲಾಸೇನ್: ಪ್ಯಾರಿಸ್ನಲ್ಲಿ ನಡೆಯಲಿರುವ 2024ರ ಒಲಿಂಪಿಕ್ ಕೂಟದಲ್ಲಿ ಬ್ರೇಕ್ ಡ್ಯಾನ್ಸ್ ಅನ್ನು ನೂತನ ಕ್ರೀಡೆಯಾಗಿ ಸೇರ್ಪಡೆಗೊಳಿಸಲಾಗಿದೆ. ಇತ್ತೀಚಿಗೆ ನಡೆದ ಅಂತರರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ (ಐಒಸಿ) ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಬ್ರೇಕ್ಡ್ಯಾನ್ಸ್ಗೆ ಮಾನ್ಯತೆ ನೀಡಲು ತೀರ್ಮಾನ ಕೈಗೊಳ್ಳಲಾಯಿತು. 'ಯುವಜನತೆ ಹೆಚ್ಚು ಇಷ್ಟಪಡುವ ಕ್ರೀಡೆಗಳತ್ತ ಗಮನ ಕೊಡುವುದು ನಮ್ಮ ಆದ್ಯತೆ' ಎಂದು ಒಲಿಂಪಿಕ್ ಸಮಿತಿಯ ಮುಖ್ಯಸ್ಥ ಥಾಮಸ್ ಬಾಕ್ ತಿಳಿಸಿದ್ದಾರೆ. ಇನ್ನು ಪ್ಯಾರಿಸ್ ನಡೆಯಲಿರುವ ಒಲಿಂಪಿಕ್ಸ್ನಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳ ಸಂಖ್ಯೆ 10,500 ಆಗಿರಲಿದ್ದು, ಪದಕ ಗೆಲ್ಲುವ ಕ್ರೀಡೆಗಳ ಸಂಖ್ಯೆ 339 ರಿಂದ 329ಕ್ಕೆ ಇಳಿಯಲಿವೆ ಎಂದೂ ಎಂದೂ ಥಾಮಸ್ ಬಾಕ್ ತಿಳಿಸಿದ್ದಾರೆ.