Job Description: # ನೇಪಾಳ ಹಾಗೂ ಚೀನಾ ಜಂಟಿಯಾಗಿ ವಿಶ್ವದ ಅತ್ಯುನ್ನತ ಶಿಖರ ಮೌಂಟ್ ಎವರೆಸ್ಟ್ ಪರಿಷ್ಕೃತ ಎತ್ತರ 8,848.86 ಮೀಟರ್ (2,9031.69 ಅಡಿ) ಎಂದು ಘೋಷಿಸಿವೆ. ಈ ಮೊದಲು ಭಾರತವು ಮೌಂಟ್ ಎವರೆಸ್ಟ್ ನ ಎತ್ತರವನ್ನು 1954ರಲ್ಲಿ ಅಳತೆಮಾಡಿತ್ತು, ಅದು ಇದೀಗ ಬಿಡುಗಡೆಗೊಳಿಸಿರುವ ಎತ್ತರಕ್ಕಿಂತ 86 ಸೆಂಟಿ ಮೀಟರ್ ಹೆಚ್ಚಾಗಿದೆ. # ಭಾರತವು 1954ರಲ್ಲಿ ನಡೆಸಿದ ಸಮೀಕ್ಷೆಯಂತೆ ಮೌಂಟ್ ಎವರೆಸ್ಟ್ ಎತ್ತರವು 8,848 ಮೀಟರ್ ಕಂಡು ಬಂದಿತ್ತು. # ನೇಪಾಳ ಸರ್ಕಾರವು 2015ರ ಭೀಕರ ಭೂಕಂಪ ಕಾರಣಗಳಿಂದಾಗಿ ಮೌಂಟ್ ಎವರೆಸ್ಟ್ನ ಎತ್ತರದಲ್ಲಿ ಬದಲಾವಣೆ ಆಗಿರಬಹುದು ಎಂಬ ಶಂಕೆಯಿಂದಾಗಿ ಸರ್ಕಾರವು ಪರ್ವತದ ನಿಖರ ಎತ್ತರವನ್ನ ಅಳೆಯಲು ನಿರ್ಧರಿಸಿತು. ಹೀಗಾಗಿ ವಿಶ್ವದ ಅತ್ಯುನ್ನತ ಶಿಖರ ಮೌಂಟ್ ಎವರೆಸ್ಟ್ನ ಹೊಸ ಎತ್ತರ 8,848.86 ಮೀಟರ್ ಎಂದು ಚೀನಾ ಮತ್ತು ನೇಪಾಳ ಜಂಟಿಯಾಗಿ ಘೋಷಣೆ ಮಾಡಿದೆ