Job Description: "ಭಾರತದಲ್ಲಿ 2021ರ ದ್ವಿತೀಯಾರ್ಧದಲ್ಲಿ 5G ಕ್ರಾಂತಿಯಲ್ಲಿ ಜಿಯೋ ಮುಂಚೂಣಿಯಲ್ಲಿ ಇರುತ್ತದೆ" ಎಂದು ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರು ಇತ್ತೀಚಿಗೆ ಭಾಗವಹಿಸಿದ್ದ ಭಾರತ ಮೊಬೈಲ್ ಕಾಂಗ್ರೆಸ್ 2020ರಲ್ಲಿ ಸಭೆಯಲ್ಲಿ ತಿಳಿಸಿದ್ದಾರೆ. * ಪ್ರಸ್ತುತ ಭಾರತದಲ್ಲಿ ಸುಮಾರು 30 ಕೋಟಿ ಜನರು 2G ತಂತ್ರಜ್ಞಾನ ಬಳಸುತ್ತಿದ್ದು, ಇವರೆಲ್ಲರಿಗೂ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಒದಗಿಸುವ ಮೂಲಕ ಡಿಜಿಟಲ್ ಆರ್ಥಿಕತೆಯನ್ನು ಹೆಚ್ಚಿಸಬಹುದು ಎಂದು ಇದೆ ವೇಳೆ ಅಂಬಾನಿ ತಿಳಿಸಿದ್ದಾರೆ. * ಪ್ರಸ್ತುತ ದಕ್ಷಿಣ ಕೊರಿಯಾ, ಚೀನಾ ಮತ್ತು ಯುನೈಟೆಡ್ ಸ್ಟೇಟ್ಸ್ ರಾಷ್ಟ್ರಗಳು 5ಜಿ ತಂತ್ರಜ್ಞಾನವನ್ನು ಬಳಸಿ ಜಗತ್ತನ್ನು ಮುನ್ನಡೆಸುವ ದೇಶಗಳಾಗಿವೆ.