Job Description: ನವದೆಹಲಿ : ಭಾರತದ ಸುಪ್ರೀಂಕೋರ್ಟ್ ಹೊಸ ಸಂಸತ್ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಇಂದು ಅನುಮತಿ ನೀಡಿ ತೀರ್ಪು ನೀಡಿದೆ, ಹಾಗು ಸೆಂಟ್ರಲ್ ವಿಸ್ಟಾ ಪ್ರೊಜೆಕ್ಟ್ನ್ನು ವಿರೋಧಿಸಿ ಸಲ್ಲಿಸಿರುವ ಅರ್ಜಿಯ ವಿಲೇವಾರಿಯ ತನಕ ಕಟ್ಟಡದ ಧ್ವಂಸ ಅಥವಾ ನಿರ್ಮಾಣ ಕಾರ್ಯವನ್ನು ಮಾಡುವಂತಿಲ್ಲ ಎಂದು ತೀರ್ಪಿನಲ್ಲಿ ಆದೇಶಿಸಿದೆ. ಇದೆ ವೇಳೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನೂತನ ಸಂಸತ್ ಕಟ್ಟಡ ನಿರ್ಮಾಣ ವೇಳೆ ಯಾವುದೇ ಕಟ್ಟಡ ದ್ವಂಸ ಇಲ್ಲವೇ ಮರಗಳನ್ನು ಕಡಿಯಲಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ಗೆ ತಿಳಿಸಿದರು.