Job Description: ಉಡುಪಿ: ಖ್ಯಾತ ರಂಗಕರ್ಮಿ, ಲೇಖಕ, ಉಪನ್ಯಾಸಕ ಉದ್ಯಾವರ ಮಾಧವ ಆಚಾರ್ಯ ಅವರು ತಮ್ಮ 80ನೇ ವಯಸ್ಸಿನಲ್ಲಿ ಇತ್ತೀಚಿಗೆ ನಿಧನರಾದರು. ಮಾಧವ ಆಚಾರ್ಯ ಅವರು 1941ರ ಫೆ 25ರಂದು ಜನಿಸಿದರು. ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿದಾರರಾಗಿದ್ದ ಇವರು 3 ದಶಕಗಳ ಕಾಲ ಉಡುಪಿಯ ಪೂರ್ಣಪ್ರಜ್ಞಾ ಕಾಲೇಜಿನಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾಗಿ ಸೇವೆ ನೀಡಿದ್ದಾರೆ. * ಪ್ರಸಿದ್ಧ ಗುಡ್ಡೆದ ಭೂತ ಧಾರಾವಾಹಿಯಲ್ಲಿ ಉದ್ಯಾವರ ಮಾಧವ ಆಚಾರ್ಯರು ನಟರಾಗಿ ಅಭಿನಯಿಸಿದ್ದಾರೆ. * ನಾಡಿನಾದ್ಯಂತ ಸುಮಾರು 50 ಕ್ಕೂ ಹೆಚ್ಚು ನಾಟಕಗಳಿಗೆ ನಿರ್ದೇಶನ ಮಾಡಿದ್ದಾರೆ. * ಕರ್ನಾಟಕ ರಾಜ್ಯೋತ್ಸವ, ರಂಗ ವಿಷಾರದ ಪ್ರಶಸ್ತಿ ಸೇರಿ ಹಲವು ಗೌರವಗಳಿಗೆ ಭಾಜನರಾಗಿದ್ದಾರೆ.