Job Description: ಭೋಪಾಲ್: ಮಧ್ಯಪ್ರದೇಶ ರಾಜ್ಯದ ಐತಿಹಾಸಿಕ ಹಿನ್ನೆಲೆಯ ನಗರಗಳಾದ ಗ್ವಾಲಿಯರ್ ಮತ್ತು ಒರಛಾ ಈಗ ಯುನೆಸ್ಕೊ ವಿಶ್ವ ಪಾರಂಪರಿಕ ನಗರಗಳ ಪಟ್ಟಿಗೆ ಸೇರಿಕೊಂಡಿರುವುದಾಗಿ ಮಧ್ಯ ಪ್ರದೇಶ ಸರ್ಕಾರ ಘೋಷಿಸಿದೆ. * ಯುನೆಸ್ಕೊ ಸಂಸ್ಥೆಯು ವಿಶ್ವಸಂಸ್ಥೆಯ ಭಾಗವಾಗಿದ್ದು, ಇದು ಶಿಕ್ಷಣ, ವಿಜ್ಞಾನ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಸಹಕಾರ ರೂಪಿಸುವ ಮೂಲಕ ಶಾಂತಿ ಮತ್ತು ಭದ್ರತೆಗೆ ಒತ್ತು ನೀಡುತ್ತಿದೆ. * ಕೋಟೆಗಳ ನಗರವಾದ ಗ್ವಾಲಿಯರ್ 9ನೇ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂದಿತ್ತು, ಮತ್ತು16ನೇ ಶತಮಾನದಲ್ಲಿ ಈ ನಗರ ಬುಂದೇಲರ ಆಡಳಿತದಲ್ಲಿ ರಾಜಧಾನಿಯಾಗಿತ್ತು. ನಗರವನ್ನು ಗುರ್ಜಾರ್ ಪ್ರತಿಹಾರ್ ರಾಜವಂಶ, ತೋಮರ್, ಸಿಂಧಿಯಾ ಮನೆತನ ಆಳಿವೆ.ಇನ್ನು ಒರಛಾ ನಗರವು ಇಲ್ಲಿರುವ ದೇವಸ್ಥಾನಗಳಿಂದ ಹೆಸರುವಾಸಿಯಾಗಿದೆ.