Job Description: ಬಹರೈನ್ : ಇತ್ತೀಚಿಗೆ ಬಹರೈನ್ ನ ಸಖಿರ್ ನಲ್ಲಿ ನಡೆದ ಸಖಿರ್ ಗ್ರ್ಯಾಂಡ್ಪ್ರಿಕ್ಸ್ನಲ್ಲಿ ಭಾರತದ ಕಾರ್ ರೇಸರ್ ಜೆಹಾನ್ ದರುವಾಲ ಜಯ ಸಾಧಿಸುವ ಮೂಲಕ ಫಾರ್ಮುಲಾ 2 ರೇಸ್ ಗೆದ್ದ ಮೊದಲ ಭಾರತೀಯ ಎಂಬ ವಿಶಿಷ್ಠ ಸಾಧನೆ ಮಾಡಿದರು. ಭಾರತದ ಇಪ್ಪತ್ತೆರಡು ವರ್ಷದ ಭಾರತೀಯ ಜೆಹಾನ್ ದರುವಾಲ ಅವರು ರೇಯೋ ರೇಸಿಂಗ್ ಪರ ಕಾರು ಚಲಾಯಿಸಿ ವಿಜಯಸಾಧಿಸಿದ್ದು, ಇದು ಫಾರ್ಮುಲಾ 2 ರೇಸಿನಲ್ಲಿ ಅವರು ಮೊದಲ ಜಯವಾಗಿದೆ. ಜರ್ಮನಿಯ ಮಿಕ್ ಷೂಮೇಕರ್ ಮತ್ತು ಬ್ರಿಟಿಷ್ ರೇಸರ್ ಡೇನಿಯಲ್ ಟಿಕ್ಟಮ್ ವಿರುದ್ಧದ ರೋಚಕ ಸ್ಪರ್ಧೆಯಲ್ಲಿ ಜೇಹನ್ ದಾರುವಾಲ ಅವರು ಅಗ್ರ ಸ್ಥಾನ ಪಡೆದರು.