Job Description: ಟೋಕಿಯೊ : ಜಪಾನ್ ರಾಷ್ಟ್ರವು ಉಡಾಯಿಸಿದ ಶೋಧಕ ನೌಕೆ 'ಹಯಬುಸ-2' ದೂರದ ಕ್ಷುದ್ರ (ಸಣ್ಣ) ಗ್ರಹವೊಂದರಿಂದ ಸಂಗ್ರಹಿಸಿದ ಮಾದರಿಗಳೊಂದಿಗೆ ಯಶಸ್ವಿಯಾಗಿ ಭೂಮಿಗೆ ಬಂದಿಳಿದಿದೆ. * ಈ ಶೋಧನೌಕೆಯನ್ನು 2014ರಲ್ಲಿ ಉಡಾಯಿಸಲಾಗಿದ್ದು, 'ಹಯಬುಸ-2' ಶೋಧಕ ನೌಕೆಯು ಅಂದಾಜು 30 ಕೋಟಿ ಕಿಲೋಮೀಟರ್ ನಷ್ಟು ಸಂಚರಿಸಿ 'ರಯಗು' ಎಂಬ ಕ್ಷುದ್ರ ಗ್ರಹದಿಂದ ಮಾದರಿಗಳನ್ನು ಸಂಗ್ರಹಿಸಿ ಮರಳಿದೆ. * ಕ್ಷುದ್ರಗ್ರಹದಿಂದ ಸಂಗ್ರಹಿಸಲಾದ ಈ ಮಾದರಿಯು ವಿಶ್ವ ಉಗಮವಾದಾಗಿನಿಂದ ಬದಲಾಗದೆ ಹಾಗೆಯೆ ಉಳಿದಿರುವ ಬಗ್ಗೆ ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.