Job Description: ನವದೆಹಲಿ: ಭಾರತ ವಿದೇಶಾಂಗ ಸಚಿವರಾದ ಎಸ್. ಜೈಶಂಕರ್ ಅವರು ಶೀಘ್ರದಲ್ಲೇ ಕೊಲ್ಲಿ ರಾಷ್ಟ್ರಗಳಾದ ಕುವೈತ್, ಕತಾರಗಳಿಗೆ ಭೇಟಿ ನೀಡಲಿದ್ದಾರೆ. ಇನ್ನು ಇದೇ ವೇಳೆ ಭೂಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ ಕೂಡ ಯುಎಇ ಮತ್ತು ಸೌದಿ ಅರೇಬಿಯ ರಾಷ್ಟ್ರಗಳಿಗೆ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಭೇಟಿಗಳ ನಿಖರ ಉದ್ದೇಶ ಬಹಿರಂಗಗೊಂಡಿಲ್ಲ ಆದರೆ ಭೇಟಿಯಿಂದಾಗಿ ಕೊಲ್ಲಿ ರಾಷ್ಟ್ರಗಳೊಂದಿಗಿನ ಸ್ನೇಹವನ್ನು ಇನ್ನಷ್ಟು ಬಲಗೊಳಿಸಲಾಗುವುದು. * ಪ್ರಸ್ತುತ ವಿದೇಶದಲ್ಲಿ ನೆಲೆಸಿರುವ ಒಟ್ಟು ಭಾರತೀಯರ ಪೈಕಿ ಶೇ.70 ರಷ್ಟು ಜನ ಪಶ್ಚಿಮ ಏಷ್ಯಾದ ಯುಎಇ, ಒಮಾನ್, ಕತಾರ್, ಸೌದಿ ಅರೇಬಿಯ, ಕುವೈತ್, ಬಹ್ರೈನ್ ರಾಷ್ಟ್ರಗಳಲ್ಲಿಯೇ ನೆಲೆಸಿದ್ದಾರೆ ಎನ್ನುವುದು ವಿಶೇಷ.