Job Description: ➤ ಜಾಗತಿಕ ಪರಿಸರ ಸಂರಕ್ಷಣೆ ಮತ್ತು ಭೂಕುಸಿತ ತಡೆಗಟ್ಟುವಲ್ಲಿ ಭಾರತವು ಮತ್ತೊಂದು ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. 2011 ಮತ್ತು 2020 ರ ನಡುವೆ ದೇಶದಲ್ಲಿ ಬಲಬರೋಬ್ಬರಿ 21.76 ಮಿಲಿಯನ್ ಹೆಕ್ಟೇರ್ ಪಾಳು ಬಿದ್ದ ಮತ್ತು ಅರಣ್ಯ ನಾಶವಾಗಿದ್ದ ಭೂಮಿಯನ್ನು ಯಶಸ್ವಿಯಾಗಿ ಪುನಶ್ಚೇತನಗೊಳಿಸುವ ಮೂಲಕ ಭಾರತವು ಜಾಗತಿಕ ವೇದಿಕೆಯಲ್ಲಿ ಪ್ರಶಂಸೆಗೆ ಪಾತ್ರವಾಗಿದೆ. ಅಂತರರಾಷ್ಟ್ರೀಯ ಪ್ರಕೃತಿ ಸಂರಕ್ಷಣಾ ಸಂಸ್ಥೆ (IUCN) ಬಿಡುಗಡೆ ಮಾಡಿರುವ ಭಾರತದ ದ್ವಿತೀಯ ಪ್ರಗತಿ ವರದಿಯಲ್ಲಿ ಈ ಮಹೋನ್ನತ ಸಾಧನೆಯನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ. ಭಾರತವು 2030ರ ವೇಳೆಗೆ ಹಮ್ಮಿಕೊಂಡಿದ್ದ ಒಟ್ಟು ಗುರಿಯಲ್ಲಿ ಈಗಾಗಲೇ ಶೇಕಡಾ 84 ರಷ್ಟನ್ನು ಸಾಧಿಸಿದೆ.➤ ಬಾನ್ ಚಾಲೆಂಜ್ (Bonn Challenge): ವಿನಾಶದಂಚಿಗೆ ತಲುಪುತ್ತಿರುವ ಜಾಗತಿಕ ಪರಿಸರ ಅಥವಾ ಭೂಮಿಗೆ ಮರುಜೀವ ನೀಡಲು ಜಗತ್ತಿನಾದ್ಯಂತ ದೇಶಗಳು ಒಂದಾಗಿ ಕೈಜೋಡಿಸಿರುವ ಒಂದು ಸ್ವಯಂಪ್ರೇರಿತ ಜಾಗತಿಕ ಶಪಥ ಅಥವಾ ಸವಾಲೇ 'ಬಾನ್ ಚಾಲೆಂಜ್' ಇದನ್ನು 2011ರಲ್ಲಿ ಜರ್ಮನಿ ಸರ್ಕಾರ ಮತ್ತು ಇಂಟರ್‌ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ (IUCN) ಜಂಟಿಯಾಗಿ ಜರ್ಮನಿಯ 'ಬಾನ್' ನಗರದಲ್ಲಿ ಜಾರಿಗೆ ತಂದವು. ಇಡೀ ಪ್ರಪಂಚದಲ್ಲಿ ಹಾಳಾಗಿರುವ 150 ಮಿಲಿಯನ್ ಹೆಕ್ಟೇರ್ ಭೂಮಿಯನ್ನು 2020ರ ವೇಳೆಗೆ ಹಾಗೂ 350 ಮಿಲಿಯನ್ ಹೆಕ್ಟೇರ್ ಭೂಮಿಯನ್ನು 2030ರ ವೇಳೆಗೆ ಮತ್ತೆ ಹಸಿರಾಗಿಸುವುದು, ಅಲ್ಲಿ ಕಾಡು ಮತ್ತು ಕೃಷಿಯನ್ನು ಮರುಸ್ಥಾಪಿಸುವುದು ಇದರ ಮುಖ್ಯ ಆಶಯವಾಗಿದೆ.➤ ಭಾರತದ ಜಾಗತಿಕ ಸಂಕಲ್ಪ: 2019 ರಲ್ಲಿ ನವದೆಹಲಿಯಲ್ಲಿ ನಡೆದ ವಿಶ್ವ ಮರುಭೂಮೀಕರಣ ವಿರೋಧಿ ಸಮಾವೇಶದ (UNCCD COP-14) ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 2030ರ ವೇಳೆಗೆ 26 ಮಿಲಿಯನ್ ಹೆಕ್ಟೇರ್ ಪಾಳು ಭೂಮಿಯನ್ನು ಪುನಶ್ಚೇತನಗೊಳಿಸುವ ಭಾರತದ ಜಾಗತಿಕ ಸಂಕಲ್ಪವನ್ನು ಪ್ರಕಟಿಸಿದ್ದರು. ಇದು ವಿಶ್ವದಲ್ಲೇ ಅತಿ ದೊಡ್ಡ ಪರಿಸರ ಸಂರಕ್ಷಣಾ ಗುರಿಗಳಲ್ಲಿ ಒಂದಾಗಿದೆ.➤ ರಾಜ್ಯವಾರು ಪ್ರಗತಿ: ತೆಲಂಗಾಣಕ್ಕೆ ಅಗ್ರಸ್ಥಾನ: IUCN ಇತ್ತೀಚೆಗೆ ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ದೇಶದಲ್ಲೇ ಅತ್ಯಂತ ಹೆಚ್ಚು ಭೂಮಿಯನ್ನು ಪರಿಸರ ಸ್ನೇಹಿಯಾಗಿ ಪರಿವರ್ತಿಸಿ, ಪುನಶ್ಚೇತನಗೊಳಿಸಿದ ರಾಜ್ಯಗಳ ಪಟ್ಟಿಯಲ್ಲಿ ತೆಲಂಗಾಣ ಪ್ರಥಮ ಸ್ಥಾನದಲ್ಲಿದೆ (ಸುಮಾರು 4.18 ಮಿಲಿಯನ್ ಹೆಕ್ಟೇರ್). ತೆಲಂಗಾಣವು ಕೃಷಿ ಅರಣ್ಯೀಕರಣ (Agroforestry) ಮೂಲಕ ಈ ಯಶಸ್ಸು ಕಂಡಿದೆ. ಇದರ ನಂತರದ ಸ್ಥಾನಗಳಲ್ಲಿ ಈ ಕೆಳಗಿನ ರಾಜ್ಯಗಳಿವೆ: ತೆಲಂಗಾಣ (ಪ್ರಥಮ ಸ್ಥಾನ) ಆಂಧ್ರಪ್ರದೇಶ ಗುಜರಾತ್ ಮಧ್ಯಪ್ರದೇಶ ಒಡಿಶಾ ➤ ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಅವರ ಪ್ರಕಾರ, ಸರ್ಕಾರದ ಬದ್ಧತೆ ಹಾಗೂ ಸಾರ್ವಜನಿಕರ ಸಹಭಾಗಿತ್ವದ ಭೂಮಿ ಪುನಶ್ಚೇತನ ಪ್ರಕ್ರಿಯೆಯಿಂದಾಗಿ ದೇಶದ ಗ್ರಾಮೀಣ ಭಾಗದಲ್ಲಿ ಸುಮಾರು 122 ಕೋಟಿ (1.22 ಬಿಲಿಯನ್) ಮಾನವ ದಿನಗಳ ಉದ್ಯೋಗ ಸೃಷ್ಟಿಯಾಗಿದೆ.➤ ಯಶಸ್ಸಿಗೆ ಕಾರಣವಾದ ಪ್ರಮುಖ ಯೋಜನೆಗಳು: ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ (PMKSY): ಇದರ ಜಲಾನಯನ ಅಭಿವೃದ್ಧಿ ಘಟಕದ ಅಡಿಯಲ್ಲಿ 27 ಮಿಲಿಯನ್ ಹೆಕ್ಟೇರ್‌ಗೂ ಹೆಚ್ಚು ಭೂಮಿಯನ್ನು ಅಭಿವೃದ್ಧಿಪಡಿಸಲಾಗಿದೆ. ಜಿಯೋ-ಟ್ಯಾಗ್ ನೈಸರ್ಗಿಕ ಆಸ್ತಿಗಳು: ಪರಿಸರ ಸಂರಕ್ಷಣೆಗೆ ಪೂರಕವಾದ 61.3 ಮಿಲಿಯನ್‌ಗೂ ಹೆಚ್ಚು ಜಿಯೋ-ಟ್ಯಾಗ್ ಹೊಂದಿದ ನೈಸರ್ಗಿಕ ಆಸ್ತಿಗಳನ್ನು ಸೃಷ್ಟಿಸಲಾಗಿದೆ. ಗ್ರೀನ್ ಇಂಡಿಯಾ ಮಿಷನ್ ಮತ್ತು ಕ್ಯಾಂಪಾ (CAMPA): ಕಳೆದ ಐದು ವರ್ಷಗಳಲ್ಲಿ ಕ್ಯಾಂಪಾ ನಿಧಿಯಡಿ ಸುಮಾರು 3.20 lakh ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯೀಕರಣ ಮಾಡಲಾಗಿದೆ. ಅರಾವಳಿ ಗ್ರೀನ್ ವಾಲ್ ಉಪಕ್ರಮ: ಮರುಭೂಮಿ ಹರಡುವಿಕೆಯನ್ನು ತಡೆಯಲು ಜಾರಿಗೆ ತರಲಾದ ಈ ಯೋಜನೆಯು ತನ್ನ ವಾರ್ಷಿಕ ಗುರಿಯನ್ನು ಮೀರಿದ ಸಾಧನೆ ಮಾಡಿದೆ. ಮಿಸ್ತಿ ಯೋಜನೆ (MISHTI): 2028ರ ವೇಳೆಗೆ 54,000 ಹೆಕ್ಟೇರ್ ಮ್ಯಾಂಗ್ರೋವ್ ಪ್ರದೇಶವನ್ನು ಪುನಶ್ಚೇತನಗೊಳಿಸುವ ಗುರಿ ಹೊಂದಲಾಗಿದೆ.