Job Description: # ದೇಶೀಯ ನಿರ್ಮಿತ ಆಕಾಶ್ ಕ್ಷಿಪಣಿಯ ಶತ್ರುಗಳ ವಿಮಾನವನ್ನು ಕ್ಷಣಾರ್ಧದಲ್ಲಿ ಹೊಡೆದುರುಳಿಸುವ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿ ನಡೆಸಲಾಗಿದೆ ಎಂದು ಭಾರತೀಯ ವಾಯುಪಡೆ ಘೋಷಿಸಿದೆ. # ಆಂಧ್ರ ಪ್ರದೇಶದ ಸೂರ್ಯಲಂಕಾ ಪರೀಕ್ಷಾ ಕೇಂದ್ರದಲ್ಲಿ ದೇಶೀಯ ನಿರ್ಮಿತ 10 ಆಕಾಶ್ ಕ್ಷಿಪಣಿಯ ಪ್ರಯೋಗಿಸಲಾಯ್ತು ಇವು ಸಂಪೂರ್ಣ ಯಶಸ್ವಿಯಾಗಿದೆ ಎಂದು ವಾಯುಪಡೆ ಮೂಲಗಳು ಖಚಿತಪಡಿಸಿವೆ. # ಭಾರತ ಮತ್ತು ಚೀನಾ ರಾಷ್ಟ್ರಗಳ ಮಧ್ಯ ಗಡಿ ಘರ್ಷಣೆ ನಡೆಯುತ್ತಿರುವ ಈ ಸಮಯದಲ್ಲಿ ಆಕಾಶ್ ಕ್ಷಿಪಣಿಗಳು ಶತ್ರು ವಿಮಾನವನ್ನು ಹೊಡೆದುರುಳಿಸುವಲ್ಲಿ ಶಕ್ತವಾಗಿದ್ದು ವಾಯು ಗಡಿ ಉಲ್ಲಂಘಿಸುವ ಚೀನಾ ರಾಷ್ಟ್ರಕ್ಕೆ ನಡುಕ ಶುರುವಾಗಿದೆ.