Job Description: ಇತ್ತೀಚಿಗೆ ಭಾರತ ಮತ್ತು ಅಮೇರಿಕಾ ರಾಷ್ಟ್ರಗಳು ಸುಮಾರು 905 ಮಿಲಿಯನ್ ಡಾಲರು ಮೊತ್ತದ ಒಪ್ಪಂದವನ್ನು ಮಾಡಿಕೊಂಡಿದ್ದು, ಈ ಒಪ್ಪಂದದ ಪ್ರಕಾರ ಭಾರತದ ಸೇನಾ ಪಡೆಯು ಹಲವು ಶಸ್ತ್ರಾಸ್ತ್ರಗಳನ್ನು ಅಮೇರಿಕಾ ರಾಷ್ಟ್ರದಿಂದ ಆಮದು ಮಾಡಿಕೊಳ್ಳಲಿದೆ. # ಈ ಒಪ್ಪಂದದಿಂದಾಗಿ ಅಮೆರಿಕದ ರಕ್ಷಣಾ ಭದ್ರತಾ ಸಹಕಾರ ಸಂಸ್ಥೆಯು ಭಾರತ-ಅಮೆರಿಕ ರಕ್ಷಣಾ ಸಂಬಂಧವನ್ನು ಬಲಪಡಿಸುವ ಮತ್ತು ದೇಶದ ಪ್ರಮುಖ ರಕ್ಷಣಾ ಪಾಲುದಾರನ ಭದ್ರತೆಯನ್ನು ಜೊತೆಗೆ ವಿದೇಶಾಂಗ ನೀತಿ ಹಾಗೂ ರಾಷ್ಟ್ರೀಯ ಭದ್ರತೆಗೆ ಬಲ ನೀಡಲಿದೆ. # ಈ ಒಪ್ಪಂದದಡಿಯಲ್ಲಿ * ಭಾರತದ ನೌಕಾಪಡೆಯು ಒಟ್ಟು 24 ಹೆಲಿಕಾಪ್ಟರ್ಗಳನ್ನು ಖರೀದಿ ಮಾಡುತ್ತಿದೆ. * ಅಮೆರಿಕ ಭಾರತಕ್ಕೆ ತನ್ನ ಸಿ-130 ಸೂಪರ್ ಹರ್ಕ್ಯುಲಸ್ ಸೇನಾ ಸಾಗಣೆ ವಿಮಾನದ ನೆರವಿನ ಸೇವೆಯ ಜತೆಗೆ 90 ಮಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಸೇನಾ ಉಪಕರಣಗಳನ್ನು ಮಾರಾಟ ಮಾಡಲಿದೆ.