Job Description: ಕೇಂದ್ರ ವಿದೇಶಾಂಗ ಸಚಿವರಾದ ಶ್ರೀ ಎಸ್ ಜೈಶಂಕರ್ ಇತ್ತೀಚೆಗೆ ಜಿನೀವಾ ದಾನಿಗಳ ಸಮಾವೇಶದಲ್ಲಿ ಭಾಗವಹಿಸಿದ್ದರು, ಈ ವೇಳೆ ಅವರು ಅಫ್ಘಾನಿಸ್ತಾನದ ಕಾಬೂಲ್ ನದಿಯ ಉಪನದಿಯಾದ ಮೈದಾನ್ ನದಿಗೆ ಅಡ್ಡಲಾಗಿ ಶಾಹೂತ್ ಅಣೆಕಟ್ಟು ನಿರ್ಮಿಸಲು ಭಾರತ ಸಹಾಯ ಹಸ್ತ ನೀಡುವ ಕುರಿತು ಘೋಷಿಸಿದ್ದಾರೆ. * ಕಾಬೂಲ್ ನಗರದಲ್ಲಿ ಸುಮಾರು 2 ಮಿಲಿಯನ್ ಜನರಿಗೆ ಕುಡಿಯುವ ನೀರನ್ನು ಪೂರೈಸಲಿದೆ. ಅಣೆಕಟ್ಟು ಸುಮಾರು 10,000 ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಸೌಲಭ್ಯವನ್ನು ಒದಗಿಸಲಿದೆ. * ಈ ಮೊದಲು 2016 ರಲ್ಲಿ, ಅಫ್ಘಾನಿಸ್ತಾನದ ಹರಿ ನದಿಗೆ (ಹೆರಾತ್ ಪ್ರಾಂತ್ಯ) ಅಡ್ಡಲಾಗಿರುವ ನಿರ್ಮಿಸಿರುವ 'ಸಲ್ಮಾ ಅಣೆಕಟ್ಟು' ನಿರ್ಮಾಣಕ್ಕಾಗಿ ಭಾರತ ಹಣ ಹೂಡಿತ್ತು. ಕಾರಣ ಈ ಅಣೆಕಟ್ಟನ್ನು ಅಫಘಾನ್-ಭಾರತ ಸ್ನೇಹ ಅಣೆಕಟ್ಟು ಎಂದೂ ಕರೆಯಲಾಗುತ್ತಿದೆ.