Job Description: ಇದೆ ಮೊದಲ ಬಾರಿಗೆ ಭಾರತವು ಶಾಂಘೈ ಸಹಕಾರಿ ಸಂಸ್ಥೆ(SCO) ಶೃಂಗಸಭೆಯ ನೇತೃತ್ವವನ್ನು ವಹಿಸಿಕೊಂಡಿದ್ದು, SCOನ ಸದಸ್ಯ ರಾಷ್ಟ್ರಗಳಾದ ರಷ್ಯಾ, ಚೀನಾ, ಖಜಕಿಸ್ತಾನ್, ಕಿರ್ಜಿಸ್ತಾನ್, ತಜಕಿಸ್ತಾನ್, ಉಜಬೆಕಿಸ್ತಾನ್ ಪ್ರಧಾನಮಂತ್ರಿಗಳು SCO ಸಭೆಗೆ ಹಾಜರಾಗಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಸ್ಪಷ್ಟಪಡಿಸಿದೆ. ಈ ಬಾರಿ ನಡೆಯುವ SCO ಶೃಂಗಸಭೆಯಲ್ಲಿ ಆರ್ಥಿಕ ಬಿಕ್ಕಟ್ಟು ನಿವಾರಣೆ ಹಾಗೂ ಜಾಗತಿಕ ಮಟ್ಟದಲ್ಲಿ ಕಾಡುತ್ತಿರುವ ಕೊವಿಡ್-19 ಸಾಂಕ್ರಾಮಿಕ ರೋಗದಿಂದ ಉಂಟಾದ ಆರ್ಥಿಕತೆ ಸವಾಲು ಎದುರಿಸುವುದು ಹೇಗೆ ಎನ್ನುವುದರ ಕುರಿತು ಪ್ರಮುಖವಾಗಿ ಚರ್ಚಿಸಲಿವೆ. * ಕಳೆದ ವರ್ಷದ SCO ಶೃಂಗಸಭೆಯ ಆತಿಥ್ಯವನ್ನು ಉಜಬೆಕಿಸ್ತಾನ್ ವಹಿಸಿಕೊಂಡಿತ್ತು. ಈ ಸಭೆಯ ಪ್ರತಿನಿಧಿಯಾಗಿ ಭಾರತದಿಂದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾಗವಹಿಸಿದ್ದರು. * ಭಾರತವು ಕಳೆದ 2017ರಲ್ಲಿ ಪೂರ್ಣ ಪ್ರಮಾಣದ SCO ಸದಸ್ಯತ್ವವನ್ನು ಪಡೆದುಕೊಂಡಿತ್ತು.