Job Description: ಸಿಖ್ ಧರ್ಮ ಸ್ಥಾಪಕರು ಹಾಗು ಧರ್ಮ ಗುರುಗಳು ಆದ ಗುರುನಾನಕ್ ಅವರ ಜನ್ಮ ದಿನವನ್ನು ಪ್ರಕಾಶ್ ಉತ್ಸವ ಮತ್ತು ಗುರುನಾನಕ್ ದೇವ್ ಜಿ ಜಯಂತಿ ಎಂದೂ ಸಿಖ್ ಧರ್ಮಿಯರು ಹಾಗೂ ದೇಶ್ಯಾದ್ಯಂತ ಆಚರಿಸುತ್ತಾರೆ. ಸಿಖ್ ಸಮುದಾಯದ ಜನರು ಇವರನ್ನು ಅತಿ ಹೆಚ್ಚು ಆರಾಧಿಸುತ್ತಾರೆ. * ಗುರು ನಾನಕ್ ಅವರು 1469ರ ಕಾರ್ತಿಕ ಪೌರ್ಣಮಿಯ ದಿನ ಪಂಜಾಬ ಪ್ರಾಂತ್ಯದ ತಳವಂಡಿ ಎಂಬಲ್ಲಿ ಕಲ್ಯಾಣದಾಸ್-ತೃಪ್ತಾ ದಂಪತಿಗೆ ಜನಿಸಿದರು. * ಸಂಗೀತ, ಕವನ, ಹಾಡಿನ ಮೂಲಕ ಭಗವಂತನ ಸಂದೇಶವನ್ನು ಊರೂರಿಗೆ ಸಾರಿದರು. * ಮಹಿಳಾಪ್ರಧಾನ ಕುಟುಂಬ ವ್ಯವಸ್ಥೆಯನ್ನು ರೂಪಿಸಿ, ಲಿಂಗ ಅಸಮಾನತೆ ಹೋಗಲಾಡಿಸಲು ಶ್ರಮಿಸಿದರು.