Job Description: ನವದೆಹಲಿ: ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಅವರ ಪತ್ನಿ ಇತ್ತೀಚಿಗೆ 'ಏರ್ಫೋರ್ಸ್ ಒನ್' ಎಂದೇ ಖ್ಯಾತಿ ಪಡೆದಿರುವ ಬೋಯಿಂಗ್-777 ಅತ್ಯಾಧುನಿಕ ವಿಮಾನವನ್ನು ಉದ್ಘಾಟಿಸಿದರು. ಹಾಗು ಉದ್ಘಾಟನಾ ಪ್ರಯಾಣವಾಗಿ ನವದೆಹಲಿಯಿಂದ ತಮಿಳುನಾಡಿನ ಚೆನ್ನೈಗೆ ಮೊದಲ ಪ್ರಯಾಣ ಬೆಳೆಸಿದರು. ಬೋಯಿಂಗ್ 777 ವಿಶೇಷತೆ : ಭಾರತದ ರಾಷ್ಟ್ರಪತಿ, ಉಪ ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿ ಪ್ರಯಾಣಕ್ಕಾಗಿ ಏರ್ಫೋರ್ಸ್ ಒನ್ ಮಾದರಿಯ ಅತ್ಯಾಧುನಿಕ ವಿಮಾನ ಇದಾಗಿದ್ದು, ಈ ವಿಮಾನದಲ್ಲಿ ಕಚೇರಿ ಸ್ಥಳ, ಸಭೆ ನಡೆಸಲು ಪ್ರತ್ಯೇಕ ಕೊಠಡಿ ಹಾಗೂ ಸಂವಹನ ಪ್ರಕ್ರಿಯೆಗಾಗಿ ಅತ್ಯಾಧುನಿಕ ವ್ಯವಸ್ಥೆ ಒಳಗೊಂಡಿದೆ. ಇನ್ನು ತುರ್ತು ಸಂದರ್ಭಗಳಲ್ಲಿ ಪ್ರತಿದಾಳಿ ಉಪಕರಣಗಳು, ಸಮಗ್ರ ಎಲೆಕ್ಟ್ರಾನಿಕ್ ರಕ್ಷಣಾ ಯುದ್ಧೋಪಕರಣ, ಕ್ಷಿಪಣಿ ದಾಳಿಯನ್ನ ತಡೆಗಟ್ಟುವ ಸಾಮರ್ಥ್ಯ ಸೌಲಭ್ಯವನ್ನು ಹೊಂದಿದೆ. ಇವುಗಳ ಇನ್ನು ಹಲವು ಅತ್ಯಾಧುನಿಕ ಸೌಲಭ್ಯಗಳನ್ನು ಈ ವಿಮಾನ ಹೊಂದಿದ್ದು, ಅಮೇರಿಕಾ ಅಧ್ಯಕ್ಷರ ವಿಮಾನದಷ್ಟೇ ಭದ್ರತೆಯನ್ನು ಈ ವಿಮಾನ ಹೊಂದಿರುವುದು ವಿಶೇಷ.