Job Description: ಗದಗ: ಕರ್ನಾಟಕ ರಾಜ್ಯ ಸರ್ಕಾರವು ಗದಗ ಜಿಲ್ಲಾ ಕೇಂದ್ರದ ನವೀಕೃತ ಬಸ್ ನಿಲ್ದಾಣಕ್ಕೆ ಗಾನಯೋಗಿ ಶ್ರೀ ಪಂಡಿತ್ ಪುಟ್ಟರಾಜ ಗವಾಯಿಗಳ ಹೆಸರನ್ನು ನಾಮಕರಣ ಮಾಡಲು ಆದೇಶಿಸಿದೆ. ಗದಗ ಜಿಲ್ಲೆಯಲ್ಲಿರುವ ಶ್ರೀ ಪಂಡಿತ್ ಪುಟ್ಟರಾಜ ಗವಾಯಿ ಮಠದಲ್ಲಿ ನೂರಾರು ವರ್ಷಗಳಿಂದ ಸಾವಿರಾರು ಅಂದ ಮಕ್ಕಳಿಗೆ ಅಕ್ಷರ ದಾಸೋಹ ನಡೆಯಿತ್ತಿದ್ದು, ಇವರ ಹೆಸರೇನು ನಗರದ ಬಸ್ ನಿಲ್ದಾಣಕ್ಕಿಡಲು ಸರ್ಕಾರ ಕ್ರಮ ಕೈಗೊಂಡಿದೆ. ಈ ಕುರಿತು ರಾಜ್ಯ ಸಾರಿಗೆ ಸಚಿವರು ಹಾಗೂ ಉಪಮುಖ್ಯಮಂತ್ರಿಗಳು ಆದ ಶ್ರೀ ಲಕ್ಷ್ಮಣ ಸವದಿ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.