Job Description: ನವದೆಹಲಿ: ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದಲ್ಲಿ ನೆಲದಿಂದ ನೆಲಕ್ಕೆ ಹಾರುವ ನೂತನ ಆವೃತ್ತಿಯ ಬ್ರಹ್ಮೋಸ್ ಭೂ ಕ್ಷಿಪಣಿಯ ಯಶಸ್ವೀಯಾಗಿ ಪರೀಕ್ಷೆಗೊಳಪಡಿಸಲಾಯಿತು. ಈ ಮೂಲಕ ಲಡಾಕ್ ಗಡಿಯಲ್ಲಿ ತಂಟೆ ಮುಂದುವರೆಸಿರುವ ನೆರೆಯ ಚೀನಾ ರಾಷ್ಟ್ರಕ್ಕೆ ಭಾರತದ ಸಾಮರ್ಥ್ಯ ಪರಿಚಯಿಸಲಾಯಿತು ಜೊತೆಗೆ ಎಚ್ಚರಿಕೆ ನೀಡಲಾಯಿತು. ಈ ಮೊದಲು ಬ್ರಹ್ಮೋಸ್ ಭೂ-ಕ್ಷಿಪಣಿಯ 290 ಕಿ ಮೀ ಸಾಮರ್ಥ್ಯವನ್ನು 400 ಕಿಮೀ ದೂರದವರಗೆ ಹೆಚ್ಚಿಸಲಾಗಿದೆ ಹಾಗೂ ಈ ಪರೀಕ್ಷೆ ಯಶಸ್ವಿಯಾಗಿದೆ.