Job Description: ಚನೈ : ಭಾರತದ ಬಂಗಾಳ ಕೊಲ್ಲಿ ಕರಾವಳಿಯಲ್ಲಿ ಉಂಟಾಗಿರುವ ನಿವಾರ್ ಚಂಡಮಾರುತ ತಮಿಳುನಾಡು ಮತ್ತು ಪುದುಚೆರಿ ಕರಾವಳಿಗೆ ಅಪ್ಪಳಿಸಿದ್ದು, ಸಂಭಾವ್ಯ ಹಾನಿ ತಪ್ಪಿಸಲು ಸ್ಥಳೀಯ ಸರ್ಕಾರಗಳು ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿವೆ. ನಿವಾರ್ ಚಂಡಮಾರುತದ ಪರಿಣಾಮ ತಮಿಳುನಾಡು, ಆಂಧ್ರದ ದಕ್ಷಿಣ ಕರಾವಳಿ, ಪುದುಚೆರಿ ಯಾ ವ್ಯಾಪ್ತಿಯಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಪುದುಚೆರಿಯಲ್ಲಿ ಮೂರು ದಿನ ನಿಷೇಧಾಜ್ಞೆ, ತಮಿಳುನಾಡಿನಲ್ಲಿ ಸಾರ್ವತ್ರಿಕ ರಜೆ ಘೋಷಿಸಲಾಗಿದೆ. * ಚಂಡಮಾರುತ ಗಂಟೆಗೆ 145 ಕಿಲೋ ಮೀಟರ್ ವೇಗದಲ್ಲಿ ಅಪ್ಪಳಿಸುವ ಸಾಧ್ಯತೆಯಿದ್ದು, ಚನೈನ ಆಗ್ನೇಯದಲ್ಲಿ 450 ಕಿಮೀ ದೂರದಲ್ಲಿ ಕೇಂದ್ರೀಕೃತವಾಗಿದೆ.